×
Ad

ಮೇ 22 ರಿಂದ ಅಖಂಡ ವೀಣಾ ಸಪ್ತಾಹ

Update: 2017-05-19 15:53 IST

ಚಿಕ್ಕಮಗಳೂರು, ಮೇ 19: ಜ್ಯೋತಿನಗರದ ಶ್ರೀ ಗುರುದತ್ತ ಭಜನಾ ಮಂಡಳಿ ಆಶ್ರಯದಲ್ಲಿ ಮೇ 22ರಿಂದ 28ರವರೆಗೆ ಅಖಂಡ ವೀಣಾ ಸಪ್ತಾಹ ನಡೆಯಲಿದೆ ಎಂದು ಮಂಡಳಿಯ ಎಚ್.ಗೋಪಿನಾಥ್ ತಿಳಿಸಿದ್ದಾರೆ.
 

ಸಂತ ಶ್ರೇಷ್ಠ ಕರ್ಕಿಹಳ್ಳಿ ಶ್ರೀ ಕ್ಷೇತ್ರದ ಶ್ರೀಸುರೇಶ ಗುರು ಮಹಾರಾಜರ ನೇತೃತ್ವದಲ್ಲಿ ಜ್ಯೋತಿ ನಗರದ ಅನುಗ್ರಹದಲ್ಲಿ 74ನೆಯ ಅಖಂಡ ವೀಣಾ ಸಪ್ತಾಹ ಮೇ22ರಿಂದ ನಡೆಯಲಿದೆ ಎಂದು ಅವರು ತಿಳಿಸಿದರು.

ಸಪ್ತಾಹದ ಅವಧಿಯಲ್ಲಿ ಪ್ರತಿನಿತ್ಯ ಅರುಣೋದಯ 4 ರಿಂದ 5ರವರೆಗೆ ಪಾರ್ಥೀವೇಶ್ವರ ಪೂಜೆ, ಸೂರ್ಯೋದಯ 5ರಿಂದ 6ರ ವರೆಗೆ, ಕಾಕಡಾರತಿ 5:30 ರಿಂದ 6 ವರೆಗೆ, ನಗರ ಸಂಕೀತರ್ನೆ 6.15 ರಿಂದ 7.15ರ ವರೆಗೆ, ಯೋಗಶಿಬಿರ-ಪ್ರಾಣಾಯಾಮ, ಮನೆಮದ್ದು 7.15ರಿಂದ 8.15ಕ್ಕೆ ವೇದಘೋಷ ನಡೆಯಲಿದೆ ಎಂದರು. 

 ಶ್ರೀಸುರೇಶ್ ಗುರುಮಹಾರಾಜ, ಹುಬ್ಬಳ್ಳಿ ಅದ್ವೈತಾಶ್ರಮದ ಶ್ರೀ ಪ್ರಣವಾನಂದ ತೀರ್ಥರೂ ಸೇರಿದಂತೆ ಸಂತಶ್ರೇಷ್ಠರಿಂದ ಆಧ್ಯಾತ್ಮಿಕ ಪ್ರವಚನ, ಸಾಧಕರಿಂದ ಉಪನ್ಯಾಸ, ಸಂಕೀರ್ತನೆಗಳು ಹಾಗೂ ಭಜನೆ ಆಯೋಜಿಸಲಾಗಿದೆ. ಕೊನೆಯ ದಿನ ಮೇ 28ರಂದು ಗುರುವಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಗೋಪಿನಾಥ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News