ಸಿದ್ದಾಪುರ: ಸರಣಿ ಕಳ್ಳತನ
Update: 2017-05-19 19:24 IST
ಸಿದ್ದಾಪುರ, ಮೇ19: ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯ ಮುಖ್ಯ ರಸ್ತೆಯಲ್ಲಿರುವ 6 ಅಂಗಡಿಗಳಿಗೆ ಕಳ್ಳರು ನುಗ್ಗಿ, ನಗದು ಸೇರಿದಂತೆ ಇತರೆ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಸಿದ್ದಾಪುರದ ಜನತಾ ಸ್ಟೋರ್ ಹಾಗೂ ನಾಯ್ಡು ವೈನ್ ಮತ್ತು ನೆಲ್ಯಹುದಿಕೇರಿಯ ನ್ಯಾಶನಲ್ ವೈನ್ಸ್, ಬ್ರಿದಿ ಫಾರ್ಮಾ (ಮೆಡಿಕಲ್ಸ್), ಬ್ಲಾಕ್ ಪೆಪ್ಪರ್ ಸೂಪರ್ ಮಾರ್ಕೆಟ್ ಸೇರಿದಂತೆ ಒಟ್ಟು 6 ಅಂಗಡಿಗಳಲ್ಲಿ ಏಕ ಕಾಲದಲ್ಲಿ ಕಳ್ಳತನ ನಡೆದಿದೆ.
ಸುಮಾರು 1 ಲಕ್ಷ ರೂ. ನಗದು ಸೇರಿದಂತೆ ಸಿಗರೇಟ್, ಬಿಯರ್ ಮತ್ತಿತರ ವಸ್ತುಗಳನ್ನು ದೋಚಿದ್ದು, ಅಂಗಡಿಯೊಂದರ ಸಿಸಿ ಕ್ಯಾಮರಾದಲ್ಲಿ ಕಳವು ದೃಶ್ಯ ಸೆರೆಯಾಗಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.