×
Ad

ಅನುಮಾನಾಸ್ಪದವಾಗಿ ಮೃತ್ಯು: ದೂರು

Update: 2017-05-19 19:36 IST

ಹುಳಿಯಾರು,ಮೇ 19: ಮತ್ತಿಘಟ್ಟ ಗ್ರಾ.ಪಂ. ಸದಸ್ಯೆ ಲೀಲಾವತಿ ಅವರ ಪತಿ ಪಂಚಾಕ್ಷರಿ (45) ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಹಂದನೆಕೆರೆ ಹೋಬಳಿ ಮತ್ತಿಘಟ್ಟ ಗಾಂಧಿನಗರದ ಬಳಿ ಶುಕ್ರವಾರ ನಡೆದಿದೆ.

ಮತ್ತಿಘಟ್ಟ ಮಜುರೆ ಕೋಡಿಪಾಳ್ಯದ ವಾಸಿಯದ ಪಂಚಾಕ್ಷರಿ ಆಟೊ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಗುರುವಾರ ರಾತ್ರಿ ತಿಪಟೂರಿಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ತೆರಳಿದ್ದ ಅವರು ಶುಕ್ರವಾರ ಬೆಳಗ್ಗೆ ಮತ್ತಿಘಟ್ಟ ಸಮೀಪದ ಗಾಂಧಿನಗರದ ರಸ್ತೆ ಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಹಂದನಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾವಿನ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಮಾಜಿ ಶಾಸಕ ಜೆ.ಸಿ.ಮಾಧು ಸ್ವಾಮಿ, ಜಿಪಂ ಸದಸ್ಯ ರಾಮಚಂದ್ರಯ್ಯ ಮತ್ತಿತರರು  ಸ್ಥಳಕ್ಕೆ ಭೇಟಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News