×
Ad

ಅನುರಾಗ್‌ತಿವಾರಿ ನಿಗೂಢ ಸಾವು ಪ್ರಕರಣ: ಯೋಗಿ ಆದಿತ್ಯನಾಥ್‌ಗೆ ಮುಖ್ಯಮಂತ್ರಿ ಪತ್ರ

Update: 2017-05-19 20:19 IST

ಬೆಂಗಳೂರು, ಮೇ 19: ಲಕ್ನೋನ ಹಝ್ರತ್‌ಗಂಜ್‌ನಲ್ಲಿರುವ ಮೀರಾಬಾಯಿ ಅತಿಥಿಗೃಹದಲ್ಲಿ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವಂತೆ ಕೋರಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಸೂಕ್ತ ತನಿಖಾ ಸಂಸ್ಥೆಯಿಂದ ಅನುರಾಗ್ ತಿವಾರಿ ಸಾವಿನ ಕುರಿತು ತನಿಖೆ ನಡೆಸಿ, ಅವರ ಸಾವಿಗೆ ಕಾರಣವಾದ ಅಂಶಗಳ ಕುರಿತು ದಕ್ಷ ಅಧಿಕಾರಿಗಳಿಂದ ತನಿಖೆ ನಡೆಸುವಂತೆ ಯೋಗಿ ಆದಿತ್ಯನಾಥ್‌ಗೆ ಸಿದ್ದರಾಮಯ್ಯ ಪತ್ರದಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News