×
Ad

​ ಕಳ್ಳತನ: ಪ್ರಕರಣ ದಾಖಲು

Update: 2017-05-19 23:00 IST

ಸಾಗರ, ಮೇ 19: ನಗರದ ಶಾಂತಿನಗರದ ನಿವಾಸಿ ಸಂತೋಷ್ ಎಂಬವರ ಮನೆಯಲ್ಲಿ ನಗನಾಣ್ಯವನ್ನು ದೋಚಿರುವ ಘಟನೆಗೆ ಸಂಬಂಧಪಟ್ಟಂತೆ ಗುರುವಾರ ದೂರು ದಾಖಲಾಗಿದೆ. ಶಾಂತಿನಗರದ ನಿವಾಸಿ ಸಂತೋಷ್ ಎಂಬವರ ಮನೆಯ ಹಿಂಭಾಗದ ವೆಂಟಿಲೇಟರ್ ಮೂಲಕ ಒಳಗೆ ಪ್ರವೇಶ ಮಾಡಿದ ಕಳ್ಳರು ಗಾಡ್ರೇಜ್ ಬೀರುವಿನಲ್ಲಿದ್ದ 15 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ 400 ಗ್ರಾಂ ತೂಕದ ಬೆಳ್ಳಿ ವಸ್ತುಗಳು ಮತ್ತು ಮನೆಯೊಳಗಿನ ಕಚೇರಿಯ ಪುಸ್ತಕದ ಹಿಂಭಾಗದಲ್ಲಿ ಇರಿಸಿದ್ದ 25 ಸಾವಿರ ರೂ. ನಗದು ದೋಚಲಾಗಿದೆ.

ಸಂತೋಷ್ ಮತ್ತು ಕುಟುಂಬದವರು ಊರಿನಲ್ಲಿ ಇರಲಿಲ್ಲ. ವಾಪಸ್ ಮನೆಗೆ ಬಂದು ನೋಡಿದಾಗ ಕಳ್ಳರು ಚೆಲ್ಲಾಪಿಲ್ಲಿ ಮಾಡಿದ ವಸ್ತುಗಳನ್ನು ಯಥಾಸ್ಥಿತಿಯಲ್ಲಿ ಇರಿಸಿ ಹೋಗಿದ್ದರಿಂದ ಸಂತೋಷ್‌ಗೆ ಕಳ್ಳತನ ನಡೆದಿರುವುದು ಮೊದಲು ತಿಳಿಯಲಿಲ್ಲ ಎನ್ನಲಾಗಿದೆ. ನಂತರ ಹಣ, ದೇವರ ಮುಂದೆ ಇರಿಸಿದ್ದ ಬಂಗಾರ ಆಭರಣ ಹಾಗೂ ಬೆಳ್ಳಿ ವಸ್ತುಗಳು ಹುಡುಕಿದಾಗ ನಾಪತ್ತೆ ಆಗಿರುವುದು ಬೆಳಕಿಗೆ ಬಂದಿದ್ದು, ಗುರುವಾರ ಸಂತೋಷ್ ಅವರು ನಗರ ಠಾಣೆಗೆ ಈ ಸಂಬಂಧ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News