×
Ad

​ಹಲ್ಲೆ ಆರೋಪಿಗೆ ಜೈಲು ಶಿಕ್ಷೆ: ಕೋರ್ಟ್ ಆದೇಶ

Update: 2017-05-20 23:08 IST

ಚಿಕ್ಕಮಗಳೂರು, ಮೇ 20: ಹಲ್ಲೆ ಮಾಡಿದ ಆರೋಪಿಗೆ ಜೆಎಮ್‌ಎಫ್‌ಸಿ ನ್ಯಾಯಾಲಯವು ವಿಧಿಸಿದ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ ತಿರ್ಪನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಎತ್ತಿ ಹಿಡಿದಿದೆ.
  2007 ಜು.27 ಫಿರ್ಯಾದುದಾರ ರಾಜು ಕಾಫಿ ತೋಟಕ್ಕೆ ಗೊಬ್ಬರ ಹಾಕಲೆಂದು ಗೂಡ್ಸ್ ಆಟೋದಲ್ಲಿ ಗೊಬ್ಬರವನ್ನು ತುಂಬಿಕೊಂಡು ಹೋಗುತ್ತಿದ್ದಾಗ ಪ್ರಕರಣದ ಆರೋಪಿಯಾದ ವಾಜುವಳ್ಳಿ ಲೋಕಪ್ಪಗೌಡನು ತನ್ನ ಮಾರುತಿ ಒಮ್ನಿ ಕಾರ್‌ರಸ್ತೆಯಲ್ಲಿ ನಿಲ್ಲಿಸಿದ್ದ.

ಆಟೊ ಮುಂದೆ ಹೋಗಲು ಜಾಗ ಇಲ್ಲದಿದ್ದಾಗ ರಾಜು ಕಾರಿನ ಹತ್ತಿರ ಹೋಗಿ ಲೋಕೆಪ್ಪಗೆ ಕಾರನ್ನು ಮುಂದೆ ತೆಗೆಯಿರಿ ಎಂದು ಕೇಳಿಕೊಂಡಾಗ, ಆರೋಪಿ ಲೋಕಪ್ಪಗೌಡನು ರಾಜುಗೆ ಕತ್ತಿಯಿಂದ ಎಡಕಾಲಿನ ತೊಡೆಗೆ ಕಡಿದು ತೀವ್ರ ತರವಾದ ಗಾಯವಾಗಿದ್ದ ಹಿನ್ನೆಲೆ ಆಲ್ದೂರು ಠಾಣಾ ಪೋಲಿಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಕಲಂ 504, 326, 506 ರಡಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.


  ಪ್ರಕರಣದ ವಿಚಾರಣೆ ನಡೆಸಿದ ಹಿರಿಯ ಜೆಎಮ್‌ಎಫ್‌ಸಿ ನ್ಯಾಯಾಲಯವು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಲೋಕಪ್ಪಗೌಡನಿಗೆ 2 ವರ್ಷ ಕಠಿಣ ಸಜೆ ಮತ್ತು ರೂ.5 ಸಾವಿರ ರೂ. ದಂಡ ಹಾಗೂ ಪಿರ್ಯಾದಿ ರಾಜು ಇವರಿಗೆ 3 ಸಾವಿರ ನೀಡಬೇಕೆಂದು ತೀರ್ಪು ನೀಡಿದ್ದು, ಆರೋಪಿ ಲೋಕಪ್ಪಗೌಡ ತೀರ್ಪಿನ ವಿರುದ್ಧ್ದ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದ.ವಾದವನ್ನು ಅಲಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರಭಾವತಿ ಹಿರೇಮಠ್ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿ 2 ವರ್ಷ ಕಠಿಣ ಸಜೆ ಮತ್ತು 5 ಸಾವಿರ ರೂ. ದಂಡ ಹಾಗೂ ರ್ಯಾದಿ ರಾಜು ಇವರಿಗೆ 3 ಸಾವಿರ ನೀಡಬೇಕೆಂದು ಕೆಳ ನ್ಯಾಯಾಲಯದ ತೀರ್ಪುನ್ನು ಎತ್ತಿ ಹಿಡಿದು ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಕೆ. ಕೆ.ಕುಲಕರ್ಣಿ ಮೊಕದ್ದಮೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News