ಬೀದಿ ನಾಯಿಕಡಿತದಿಂದ ಮೀನುಗಾರ ಸಾವು: ಹರತಾಳಕ್ಕೆ ಕರೆ ನೀಡಿದ ಯುಡಿಎಫ್

Update: 2017-05-22 07:31 GMT

ತಿರುವನಂತಪುರಂ, ಮೇ 22: ಪುಲ್ಲುವಿಳ ಎಂಬಲ್ಲಿ ನಿನ್ನೆ ರಾತ್ರೆ ಮೀನುಗಾರರೊಬ್ಬರನ್ನು ಬೀದಿನಾಯಿಗಳುಕಚ್ಚಿ ಕೊಂದು ಹಾಕಿವೆ. ಮೃತನನ್ನು 45 ವರ್ಷ ವಯಸ್ಸಿನ ಜೊಸ್‌ಕ್ಲಿನ್ ಎಂದು ಗುರುತಿಸಲಾಗಿದೆ. ಕೆಲಸವಾದ ನಂತರ ಸಮುದ್ರ ತೀರದಲ್ಲಿ ನಡೆದು ಹೋಗುತ್ತಿದ್ದ ಜೊಸ್‌ಕ್ಲಿನ್‌ರನ್ನು ನಾಯಿಗಳ ಗುಂಪೊಂದು ಕಚ್ಚಿ ಎಳೆದಿದೆ. ಕೈ, ಗಡ್ಡ,ಮುಖಗಳಿಗೆ ಗಂಭೀರ ಗಾಯಗೊಂಡು ಪ್ರಜ್ಞೆ ಕಳಕೊಂಡು ಸಮುದ್ರ ಬದಿಯಲ್ಲಿ ಬಿದ್ದಿದ್ದರು. ಇತರ ಮೀನುಗಾರರು ಅವರನ್ನುತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಸೇರಿಸಿದ್ದರು. ಆದರೆ ಇಂದು ಬೆಳಗ್ಗೆ ಅಲ್ಲಿ ಜೊಸ್‌ಕ್ಲಿನ್ ಮೃತರಾಗಿದ್ದಾರೆ. ಮೃತದೇಹ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿದೆ.

 ಕಳೆದವರ್ಷ ಪುಲ್ಲುವಿಳದಲ್ಲಿ ವೃದ್ಧೆಯೊಬ್ಬರನ್ನು ಬೀದಿನಾಯಿಗಳು ಕಚ್ಚಿಕೊಂದು ಹಾಕಿದ್ದವು. ಜೊಸ್‌ಕ್ಲಿನ್ ಈಮಹಿಳೆಯ ನೆರೆ ಮನೆಯಲ್ಲಿ ವಾಸವಿರುವ ವ್ಯಕ್ತಿಯಾಗಿದ್ದಾರೆ, ಇಂತಹ ಘಟನೆಗಳು ಮತ್ತೆಮತ್ತೆ ಆಗುತ್ತಿದ್ದರೂ ಸರಕಾರ ಗಂಭೀರ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಅಪಾರ ಜನರು ಸಮುದ್ರ ಬದಿಯಲ್ಲಿ ಸೇರಿದ್ದಾರೆ. ಇದೇವೇಳೆ ಪುಲ್ಲವಿಳದಲ್ಲಿ ಹರತಾಳಕ್ಕೆ ಯುಡಿಎಫ್ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News