ಭಟ್ಕಳ: ಜಿ.ಎಸ್.ಬಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Update: 2017-05-22 11:16 GMT

ಭಟ್ಕಳ, ಮೇ 22: ಗೌಡ ಸಾರಸ್ವತ ಸಮಾಜ ಕಲ್ಯಾಣ ಸೇವಾ ಸಮಿತಿಯು ಭಟ್ಕಳ ತಾಲೂಕಾ ಸ್ವಸಮಾಜದ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶ್ರೀ ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಸಭಾಗೃಹದಲ್ಲಿ ಹಮ್ಮಿಕೊಂಡಿತ್ತು.

 ಸಂಪನ್ಮೂಲ ವ್ಯಕ್ತಿಗಳಾದ ರಾಷ್ಟ್ರೀಯ ಮಟ್ಟದ ಮೆಮೊರಿ ಟ್ರೇನರ್ ಯಲ್ಲಾಪುರದ ಯೊಗೇಶ ಶಾನಭಾಗ ಎಸೆಸೆಲ್ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ 22 ವಿದ್ಯಾರ್ಥಿಗಳಿಗೆ ಪುರಸ್ಕರಿಸಿದರು.

ಅಪರಿಮಿತ ಜ್ಞಾಪಕ ಶಕ್ತಿಯ ಪ್ರಾತ್ಯಕ್ಷಿಕೆಯನ್ನು ನಡಿಸಿದ ಯೊಗೇಶ ಶಾನಭಾಗ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸ್ಕಾಲರ್ ಶಿಪ್, ಶಿಕ್ಷಣ ಸಾಲದ ಬಗ್ಗೆ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸುಬ್ರಾಯ ಕಾಮತ, ಮಂಜುನಾಥ ಪ್ರಭು, ನರೇಂದ್ರ ನಾಯಕ, ನೀತಾ ಕಾಮತ, ಅಧ್ಯಕ್ಷ ಕಿರಣ ಶಾನಭಾಗ ಮುಂತಾದವರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಅನಿಲ ಪೈ ಸ್ವಾಗತಿಸಿದರು, ಶ್ರೀನಾಥ ಪೈ ಹಾಗೂ ನಾಗೇಶ ಪ್ರಭು ಕಾರ್ಯಕ್ರಮ ನಿರೂಪಿಸಿದರು, ಪ್ರವೀಣ ನಾಯಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News