ಕಳವು ಪ್ರಕರಣ: ಮೂವರು ಮಹಿಳೆಯರ ಬಂಧನ; ಚಿನ್ನಾಭರಣ ವಶ

Update: 2017-05-22 17:34 GMT

ಮಂಡ್ಯ, ಮೇ 22: ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರು ಮಹಿಳಾ ಆರೋಪಿಗಳನ್ನು ಬಂಧಿಸಿರುವ ಪಾಂಡವಪುರ ಪೊಲೀಸರು, ಅವರಿಂದ 5.5 ಲಕ್ಷ ರೂ. ಮೌಲ್ಯದ 182 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ದ್ಯಾವರಹಳ್ಳಿ (ಕರಡಿ) ಗ್ರಾಮದ ಲಕ್ಷ್ಮೀ (47), ಗಂಗಮ್ಮ (45) ಹಾಗೂ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ದಿಡಗ ಗ್ರಾಮದ ಶೃತಿ (28) ಬಂಧಿತರು ಎಂದು ಗುರುತಿಸಲಾಗಿದೆ.


ಪಾಂಡವಪುರ ಶಾಂತಿನಗರದ ಜಯಮ್ಮ ಅವರಿಂದ ಪರ್ಸ್ ಎಗರಿಸಿ 2,700 ರೂ., ಕೆ.ಆರ್.ಪೇಟೆ ಬಳಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಚನ್ನರಾಯಪಟ್ಟಣದ ಸೌಮ್ಯ ಎಂಬುವರಿಂದ 62 ಗ್ರಾಂ ಚಿನ್ನಾಭರಣ, ಪಾಂಡವಪುರ ಬಸ್‌ನಿಲ್ದಾಣದ ಬಳಿ ಎನ್.ಜಿ.ದಿವ್ಯ ಎಂಬುವರ 55 ಗ್ರಾಂ ಆಭರಣ, ಶ್ರೀರಂಗಪಟ್ಟಣ ನಿಲ್ದಾಣದ ಬಳಿ ಗಾಯತ್ರಿ ಅವರ 65 ಗ್ರಾಂ ಒಡವೆಯನ್ನು ಬಂಧಿತರು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪಾಂಡವಪುರ ಪಟ್ಟಣದ ಅಕ್ಷಯ ಭಂಡಾರ್ ಅಂಗಡಿಯ ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದ ದೃಶ್ಯ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News