ಮರಳಿನ ಸಮಸ್ಯೆಗೆ ಶಾಸಕ ನೇರ ಹೊಣೆ: ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ

Update: 2017-05-22 17:52 GMT

ಹೊನ್ನಾಳಿ, ಮೇ 22: ತಾಲೂಕಿನಲ್ಲಿ ಉಂಟಾಗಿರುವ ಮರಳಿನ ಸಮಸ್ಯೆಗೆ ಶಾಸಕ ಡಿ.ಜಿ. ಶಾಂತನಗೌಡರೇ ನೇರ ಹೊಣೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಅಶ್ರಯ ಮನೆಗಳ ನೆಪದಲ್ಲಿ ಶಾಸಕರ ಪುತ್ರ ಸೇರಿದಂತೆ ಅವರ ಹಿಂಬಾಲಕರಿಗೆ ತಾಲೂಕಿನಲ್ಲಿರುವ ದೊಡ್ಡ-ದೊಡ್ಡ ಕ್ವಾರಿಗಳಲ್ಲಿರುವ ಮರಳನ್ನು ಲೂಟಿ ಮಾಡಿದ್ದಾರೆ. ಅಳಿದು-ಉಳಿದ ಮರಳನ್ನು ನೆಮ್ಮದಿ ಕೇಂದ್ರದ ಮೂಲಕ ಆಶ್ರಯ ಮತ್ತು ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಕೊಡುತ್ತಿರುವ ಮರಳಿನಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಆಶ್ರಯ ಮನೆಗಳಿಗೆ ಮರಳು ನೀಡಲು ಹರಳಹಳ್ಳಿ-ಗೋವಿನಕೋವಿ ಮರಳು ಕ್ವಾರಿಗಳನ್ನು ಗುರುತಿಸಿದ್ದು.ಆದರೆ , ಇಲ್ಲಿ ಮರಳು ಸಿಗುತ್ತಿಲ್ಲ. ಕೆಲವರು ಆಶ್ರಯ ಮನೆ ಹೆಸರಿನಲ್ಲಿ ಬೇರೆಯವರು ಮರಳು ಪಡೆಯಲು ಯತ್ನಿಸಿತ್ತಿದ್ದಾರೆ. ಇದನ್ನು ತಡೆಯುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಟೀಕಿಸಿದರು.

ತಾಲೂಕಿನ ಬೀರಗೊಂಡನಹಳ್ಳಿ, ಗ್ರಾಮದಲ್ಲಿನ ಮರಳು ಒಂದು ಟನ್‌ಗೆ 2,275 ರೂ.ಗಳು ಹುರಳೆಹಳ್ಳಿ ಗ್ರಾಮದ ಮರಳಿಗೆ ಒಂದು ಟನ್‌ಗೆ 7,852 ರೂ. ಬೀದರಗಡ್ಡೆ ಗ್ರಾಮದ ಮರುಳಿಗೆ 3,737 ರೂ. ಗಳಾಗಿದ್ದು, ಇದರಲ್ಲಿ ಶೇ. 10ರಷ್ಟು ನಿರ್ವಹಣಾ ವೆಚ್ಚ ವಿಧಿಸುವುದರಿಂದ ಬಾಡಿಗೆ ಸೇರಿದಂತೆ ಇತರೆ ಖರ್ಚು ಸೇರಿ ಒಂದು ಟ್ಯಾಕ್ಟರ್ ಮರಳಿಗೆ 10 ರಿಂದ 12 ಸಾವಿರ ಮರಳು ದರ ದುಬಾರಿಯಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಮರಳು ಕೈಗೆ ಸಿಗದಂತೆ ಆಗಿದೆ. ಆದ್ದರಿಂದ ಈ ಕೂಡಲೇ ಸರಕಾರ ನಿಗದಿಪಡಿಸಿದ ಟೆಂಡರ್ ಸರಳೀಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಮನೆ ಮತ್ತು ಶೌಚಾಲಯ ನಿರ್ಮಾಣ ಮಾಡುವವರಿಗೆ ಮರಳು ಸಿಗುತ್ತಿಲ್ಲ ಹಲವಾರು ಭಾರಿ ಇಒ ಗೆ ಮೌಖಿಕವಾಗಿ ದೂರು ನೀಡಿದ್ದರು ಕ್ರಮ ಜರುಗಿಸಿಲ್ಲ. ತಾಲೂಕಿನಲ್ಲಿ ಮರಳಿನ ವ್ಯವಸ್ಥೆ ಹದಗೆಡುವುದಕ್ಕೆ ನೇರ ಹೊಣೆ ಶಾಸಕ ಡಿ.ಜಿ.ಶಾಂತನಗೌಡರೇ ಕಾರಣ ಎಂದರು. ಗೋವಿನ ಕೊವಿ ಚಂದ್ರಪ್ಪ, ಕಲ್ಪನಹಳ್ಳಿಮಂಜಪ್ಪ, ಮುಕ್ತೆನಹಳ್ಳಿ ಕುಮಾರ, ನೆಲಹೊನ್ನೆ ಮಿಥನ್, ಕುಂದೂರು ಮಾಲತೇಶ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News