×
Ad

ಜಗತ್ತಿನ ಒಳಿತು-ಅಭ್ಯುದಯಕ್ಕಾಗಿ ಜಂಗಮತ್ವ ಉಳಿಯಬೇಕು: ಶ್ರೀ ಯಡಿಯೂರು ಸ್ವಾಮೀಜಿ

Update: 2017-05-23 17:12 IST

ಚಿಕ್ಕಮಗಳೂರು, ಮೇ.23: ಜಗತ್ತಿನ ಒಳಿತು-ಅಭ್ಯುದಯಕ್ಕಾಗಿ ಜಂಗಮತ್ವ ಉಳಿಯಬೇಕು ಎಂದು ಶ್ರೀ ಮದ್ರಂಭಾಪುರಿ ಖಾಸಾಶಾಖಾಮಠದ ಶ್ರೀ ಯಡಿಯೂರು ಸುಕ್ಷೇತ್ರದ ಷ.ಬ್ರ.ರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಿಸಿದರು.

ಅವರು ನಗರದ ಸುವರ್ಣ ಮಾಧ್ಯಮ ಭವನದಲ್ಲಿ ಜಂಗಮ ಬಳಗ ಆಯೋಜಿಸಿದ್ದ ಚಿಂತನಗೋಷ್ಠಿ ಹಾಗೂ ಚಿಕ್ಕೊಳಲೆ ಸದಾಶಿವಾಶಾಸ್ತ್ರಿ ಸಂಸ್ಮರಣೆಯ ಸಾನಿಧ್ಯ ವಹಿಸಿ ಪ್ರಶಸ್ತಿ ಪ್ರದಾನಿಸಿ ಆಶೀರ್ವಚನ ನೀಡಿದರು.

ಧರ್ಮ ಪಾಲನೆಗೆ ಸಂಸ್ಕಾರದ ಬಲ ಮುಖ್ಯವಾಗುತ್ತದೆ. ಸಮಾಜದಲ್ಲಿ ಸಂಸ್ಕಾರವನ್ನು ನೀಡುವ ಗುರುತರ ಹೊಣೆಗಾರಿಕೆ ಜಂಗಮರ ಮೇಲಿದೆ. ಜಂಗಮತ್ವದ ಪ್ರವರ್ಧಮಾನಕ್ಕಾಗಿ ಜಂಗಮಸಮೂಹ ಶ್ರಮಪಡಬೇಕು. ಆಚಾರ-ವಿಚಾರಗಳನ್ನು ಮೂಲಪದ್ಧತಿಗಳನ್ನು ಅನುಸರಿಸುವುದು ಅಗತ್ಯ ಎಂದು ಹೇಳಿದರು.

ಜಂಗಮಸಮಾಜದ ಹಿರಿಯರಾದ ವಿಶ್ರಾಂತ ಮುಖ್ಯ ಶಿಕ್ಷಕರುಗಳಾದ ಎ.ಎಂ.ರುದ್ರಾರಾಧ್ಯ ಮತ್ತು ಎನ್.ಎಚ್.ಮಹಾಲಿಂಗಯ್ಯ ಅವರಿಗೆ ಚಿಕ್ಕೊಳಲೆ ಸದಾಶಿವಾಶಾಸ್ತ್ರಿ ಜಂಗಮರತ್ನ ಪ್ರಶಸ್ತಿಯನ್ನು ಶ್ರೀಗಳು ಪ್ರದಾನಿಸಿ ಆಶೀರ್ವದಿಸಿದರು. ನಿವೃತ್ತ ಉಪತಹಶೀಲ್ದಾರ್ ಚಂದ್ರ ಶೇಖರಯ್ಯ ಮತ್ತು ಸುಧಾಪರಮೇಶ್ ಅತಿಥಿಗಳನ್ನು ಪರಿಚಯಿಸಿದರು. ಆಗಮಿಕರಾದ ವೇ.ಮೂ.ವಿರೂಪಾಕ್ಷಶಾಸ್ತ್ರಿ ಮತ್ತು ರೇಣುಕಯ್ಯಶಾಸ್ತ್ರಿ ವೇದಘೋಷ ಮಾಡಿದರು.
 

ವೇ.ಮೂ.ಉಪ್ಪಳ್ಳಿಬಸವರಾಜ್ಯಶಾಸ್ತ್ರಿಗಳ ಸಾಮೂಹಿಕ ರುದ್ರಪಠಣ ನಡೆಯಿತು. ರಮ್ಯ ಮತ್ತು ರೇಖಾ ಪ್ರಾರ್ಥಿಸಿದರು. ಪ್ರಾಯೋಜಕ ನಿವೃತ್ತ ಪ್ರಾಂಶುಪಾಲ ಜಯಣ್ಣ ಮತ್ತು ಸುಮಿತ್ರಾಶಾಸ್ತ್ರಿ ಅವರನ್ನು ಗೌರವಿಸಲಾಯಿತು.ಶಿವಮೊಗ್ಗದ ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ಯು.ಸೋಮಶೇಖರಯ್ಯ ಮಾತನಾಡಿದರು.
 

ರಂಗಕರ್ಮಿಆರ್.ಚಂದ್ರಶೇಖರ್, ಬಿಸಿಸಿಎಂ ಜಿಲ್ಲಾವ್ಯವಸ್ಥಾಪಕ ಐ.ಎಂ.ಬಸವರಾಜ್, ನಿವೃತ್ತಪ್ರಾಂಶುಪಾಲ ರೇವಣಸಿದ್ದಯ್ಯ, ನಿವೃತ್ತ ಶಿಕ್ಷಕಿ ಸ್ವರ್ಣಗೌರಿ, ಕೆಎಸ್‌ಆರ್‌ಟಿಸಿ ಸಂಚಾರಿ ನಿವೃತ್ತಾಧಿಕಾರಿ ತೀರ್ಥಸ್ವಾಮಿ, ರಾಮಕೃಷ್ಣ ಶಿಕಷಣಸಂಸ್ಥೆ ಆಡಳಿತಾಧಿಕಾರಿ ಉಮಾಮಹೇಶ್ವರಯ್ಯ, ವೀರಶೈವ ಸಹಕಾರ ಬ್ಯಾಂಕ್‌ನ ನಿರ್ದೇಶಕ ರವಿಕುಮಾರ್, ಆರ್.ಡಿ.ಆರಾಧ್ಯ, ಗುರುಕಾಂತಾರಾಧ್ಯ, ಜಂಗಮ ಬಳಗದ ಸಂಚಾಲಕ ಪ್ರಭುಲಿಂಗಶಾಸ್ತ್ರಿ, ಕೈಗಾರಿಕಾ ಇಲಾಖೆ ನಿವೃತ್ತ ಜಂಟಿನಿರ್ದೇಶಕ ಬಿ.ಪಿ.ಶಿವಮೂರ್ತಿ, ಉಪನ್ಯಾಸಕ ರುದ್ರಪ್ಪಶಾಸ್ತ್ರಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News