×
Ad

ಕಾರವಾರ: ಡಾಲ್ಫಿನ್ ಮೃತದೇಹ ಪತ್ತೆ

Update: 2017-05-23 22:52 IST

ಕಾರವಾರ, ಮೇ 23: ನಗರದ ಕಡಲ ತೀರದಲ್ಲಿ ಹಂಪ್‌ಬ್ಯಾಕ್ ಪ್ರಭೇದಕ್ಕೆ ಸೇರಿದ ಡಾಲ್ಫಿನ್‌ವೊಂದರ ಮೃತದೇಹ ತೇಲಿಬಂದಿದ್ದು, ಕಡಲಜೀವ ಶಾಸ್ತ್ರಜ್ಞರು ಹಾಗೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಸುಮಾರು 8 ಫೂಟ್ ಉದ್ದದ ಡಾಲ್ಫಿನ್ ಸಮುದ್ರದ ಅಲೆಯ ಅಬ್ಬರಕ್ಕೆ ಕಡಲತೀರದ ಹಳೆ ಉದ್ಯಾನವನ ಬಳಿ ಬಂದು ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.ಹಂಪ್‌ಬ್ಯಾಕ್ ಪ್ರಭೇದಕ್ಕೆ ಸೇರಿದ ಈ ಡಾಲ್ಫಿನ್‌ಗಳು 15-20 ವರ್ಷ ಬದುಕಬಲ್ಲವು. ಡಾಲ್ಫಿನ್ ದೇಹದ ಸ್ಥಿತಿಯನ್ನು ಕಂಡು ಮೃತಪಟ್ಟು ಸಾಕಷ್ಟು ದಿನವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೃತ ಡಾಲ್ಫನ್ ವಯೋ ಸಹಜವಾಗಿ ಅಶಕ್ತಗೊಂಡು ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಮರಿಯನ್ ಬಯೋಲಜಿ ಅಧಿಕಾರಿಗಳು ತಿಳಿಸಿದ್ದಾರೆ.

ಭವಿಷ್ಯದಲ್ಲಿ ಈ ಜೀವಿಯ ಬಗ್ಗೆ ಅಧ್ಯಯನ ನಡೆಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇದನ್ನು ಹೂಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಕೆ.ಡಿ. ನಾಯ್ಕ ತಿಳಿಸಿದರು.

ಈ ಸಂದರ್ಭದಲ್ಲಿ ಕಡಲ ಜೀವಶಾಸ್ತ್ರ ಅಧ್ಯಯನ ಕೇಂದ್ರದ ಶಿವಕುಮಾರ್ ಹರಗಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News