​ವೀರಾಜಪೇಟೆ ಯುವಕನ ಮೃತದೇಹ ಕೇರಳದಲ್ಲಿ ಪತ್ತೆ

Update: 2017-05-23 17:23 GMT

ವೀರಾಜಪೇಟೆ, ಮೇ 23: ವೀರಾಜಪೇಟೆಯ ಮುಹಮ್ಮದ್ ಸಲೀಂ(40) ಎಂಬವರ ಮೃತದೇಹ ಕೇರಳದ ಇರಿಟ್ಟಿಯ ನದಿಯಲ್ಲಿ ಪತ್ತೆಯಾಗಿರುವುದಾಗಿ ಇರಿಟ್ಟಿ ಪೊಲೀಸರಿಂದ ಮಾಹಿತಿ ಲಭಿಸಿದೆ. ಸಳಿಮರವರು ವೀರಾಜಪೇಟೆಯ ಪಟ್ಟಣ ಪಂಚಾಯತ್‌ನ ಮಾಜಿ ಅಧ್ಯಕ್ಷರಾಗಿದ್ದ ಫಾರೂಕ್ ರಹೀಂ ಅವರ ಸಹೋದರರಾಗಿದ್ದು, ಇರಿಟ್ಟಿಗೆ ಸಮೀಪದ ವೆಳಿಮಾನಂ ಎಂಬಲ್ಲಿನ ಯುವತಿಯೋರ್ವಳನ್ನು ವಿವಾಹವಾಗಿ ಅಲ್ಲಿಯೇ ನೆಲೆಸಿದ್ದರೆನ್ನಲಾಗಿದೆ.


ಎರಡು ದಿನಗಳ ಹಿಂದೆ ವೀರಾಜಪೇಟೆಗೆಂದು ಮನೆ ಬಿಟ್ಟಿದ್ದ ಸಲೀಂ ಕಾಣೆಯಾದ ಬಗ್ಗೆ ಪತ್ನಿ ನಳಿನಿ ಪೊಲೀಸರಿಗೆ ನೀಡಿದ ದೂರಿನನ್ವಯ ತನಿಖೆ ಆರಂಭಿಸಿದ ಪೊಲೀಸರು ಸೋಮವಾರ ಸಂಜೆ ವೇಳೆಗೆ ಇರಿಟ್ಟಿಯ ಸೇತುವೆ ಕೆಳಗಿನ ನದಿಯಲ್ಲಿ ಸಲೀಂ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News