‘ವಜ್ರ’ ಯೋಜನೆಗೆ ಜೂನ್‌ನಲ್ಲಿ ಚಾಲನೆ

Update: 2017-05-23 18:39 GMT

ಹೊಸದಿಲ್ಲಿ, ಮೇ 23: ಅನಿವಾಸಿ ಹಾಗೂ ವಿದೇಶಿ ವಿಜ್ಞಾನಿಗಳು ಭಾರತದ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವ ‘ವಿಸಿಟಿಂಗ್ ಅಡ್ವಾನ್ಸ್‌ಡ್ ಜಾಂಟ್ ರಿಸರ್ಚ್’ (ವಜ್ರ) ಯೋಜನೆಗೆ ಜೂನ್‌ನಲ್ಲಿ ಚಾಲನೆ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ.

  ಉನ್ನತ ವಿಜ್ಞಾನಿಗಳು ಭಾರತದಲ್ಲಿ ಕಾರ್ಯ ನಿರ್ವಹಿಸಲು ಮತ್ತು ಡಾಕ್ಟರೇಟ್ ಮತ್ತು ಡಾಕ್ಟರೇಟ್ ತರುವಾಯದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಈ ಯೋಜನೆ ಅವಕಾಶ ಮಾಡಿಕೊಡುತ್ತದೆ. ಭಾರತೀಯ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಸಂಶೋಧನಾ ಸಂಸ್ಕೃತಿಯ ಅರಿವು ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಆಯಾ ಕ್ಷೇತ್ರಗಳಲ್ಲಿ ಪರಿಣತರಾಗಿರುವ ವಿಜ್ಞಾನಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುವುದು. ಭಾರತೀಯ ಸಂಸ್ಥೆಗಳಲ್ಲಿ ಈ ವಿಜ್ಞಾನಿಗಳು ಸುಮಾರು 3 ತಿಂಗಳು ಲಭ್ಯವಿರುತ್ತಾರೆ. ಉಳಿದ ದಿನಗಳಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಅಶುತೋಷ್ ಶರ್ಮ ತಿಳಿಸಿದ್ದಾರೆ. ಆರಂಭದ ತಿಂಗಳಲ್ಲಿ ಇವರಿಗೆ 15,000 ಡಾಲರ್ ಸಂಬಳ, ಮುಂದಿನ ತಿಂಗಳಿನಿಂದ 10,000 ಡಾಲರ್ ಸಂಬಳ ನಿಗದಿಗೊಳಿಸಲಾಗಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News