×
Ad

ಎಐಟಿ ಕಾಲೇಜಿನಲ್ಲಿ 'ಚುಂಚನ 2017' ಸಾಂಸ್ಕೃತಿಕ ಹಬ್ಬದ ಬಹುಮಾನ ವಿತರಣೆ

Update: 2017-05-24 16:38 IST

ಚಿಕ್ಕಮಗಳೂರು, ಮೇ 24: ಭವ್ಯ ಭಾರತದ ಭವಿಷ್ಯವು ಯುವ ಜನತೆಯಲ್ಲಿ ಅಡಗಿದೆ. ಈಗಿನ ಯುವ ಪೀಳಿಗೆಗೆ ಸಮಾಧಾನ ಮತ್ತು ಮುಂದಾಲೋಚನೆಗಳು ಬಹಳ ಕಡಿಮೆ. ತಮ್ಮ ದುಡುಕು ಸ್ವಭಾವದಿಂದ, ಚಿಕ್ಕಚಿಕ್ಕ ವಿಚಾರಗಳಿಗೂ ಹತಾಶ ಭಾವವನ್ನು ಹೊಂದುತ್ತಾರೆ ಎಂದು ಎಸ್ಪಿ ಕೆ. ಅಣ್ಣಾಮಲೈ ತಿಳಿಸಿದರು.
 

ಅವರು ನಗರದ ಎಐಟಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿ ಸಂಘವು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಚುಂಚನ 2017 ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

 ಬೆಂಗಳೂರಿನ ನಟಿ ಮತ್ತು ವ್ಯಕ್ತಿತ್ವ ಸಲಹೆಗಾರ್ತಿ ತಮನ್ನಾ ಪಾಶ ಮಾತನಾಡಿ, ಯುವ ಜನತೆಯು ಯಾವಾಗಲೂ ನಂಬುವ ಮತ್ತು ಸತ್ಯವಂತರ ಪಂಕ್ತಿಯಲ್ಲಿ ಸಾಗಬೇಕು. ಸಾಧಿಸಲು ಪ್ರತಿಯೊಬ್ಬರಿಗೂ ವಿಶಿಷ್ಟವಾದ ಗುರಿಗಳಿರುತ್ತವೆ. ತಮ್ಮ ಜೀವನದಲ್ಲಿ ಮತ್ತೊಬ್ಬರಂತೆ ವಿಭಿನ್ನವಾಗಿ ಬಹಳಷ್ಟು ಪರಿಶ್ರಮದಿಂದ ಇನ್ನೊಬ್ಬರ ದ್ಯೇಯಗಳನ್ನು ಅನುಕರಿಸಿ ಸಕಾರಾತ್ಮಕವಾಗಿ ಯೋಚಿಸಿ ಮುನ್ನುಗ್ಗಬೇಕು. ಮೊದಲ ಪ್ರಯತ್ನದಲ್ಲಿ ನಾವು ತೋರುವ ಆಸಕ್ತಿ, ನಡವಳಿಗೆ, ಹಾವಾಭಾವ ತುಂಬಾ ಮುಖ್ಯವಾಗಿರುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಕೆ.ಸುಬ್ಬರಾಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

  ವಿದ್ಯಾರ್ಥಿನಿ ವೇದ ಮತ್ತು ಸಂಗಡಿಗರು ಪ್ರಾರ್ಥನೆ ನಡೆಸಿಕೊಟ್ಟರು. ವಿದ್ಯಾರ್ಥಿ ಪ್ರಜ್ವಲ್ ಎಸ್.ವಿ. ಸ್ವಾತಿಸಿ, ವಿದ್ಯಾರ್ಥಿನಿ ನೇಹ ವಂದಿಸಿದರು. ವಿದ್ಯಾರ್ಥಿನಿ ಶಾರಧಿ ಕೆ.ಆರ್  ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ಅಶ್ವಿನಿ ಮತ್ತು ವಿದ್ಯಾರ್ಥಿ ಸುಮಂತ್ ಗೋವಿಂದೆ ಕಾರ್ಯಕ್ರಮ ನಿರೂಪಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News