×
Ad

ರಮಝಾನ್ ಕಿಟ್ ವಿತರಣೆ

Update: 2017-05-24 16:44 IST

ಮೂಡಿಗೆರೆ, ಮೇ 24:  ಎಸ್ಕೆಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲಾ ಸಮಿತಿಯ ವತಿಯಿಂದ ಮೂಡಿಗೆರೆ ಕೇಂದ್ರ ಮಸೀದಿ ವಠಾರದಲ್ಲಿ ವರ್ಷಂಪ್ರತಿ ಕುವೈತ್-ಕೇರಳ ಇಸ್ಲಾಮಿಕ್ ಕೌನ್ಸಿಲ್ ಸೆಂಟ್ರಲ್ ಕಮಿಟಿಯ ವತಿಯಿಂದ ನೀಡಲ್ಪಡುವ ರಮಝಾನ್ ಕಿಟ್ ವಿತರಣೆ ಕಾರ್ಯಕ್ರಮವು ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಿ.ಕೆ. ಇಬ್ರಾಹೀಂ ನೇತೃತ್ವದಲ್ಲಿ ನಡೆಯಿತು.
 

ಖಲಂದರ್ ದಾರಿಮಿ ಪ್ರಾರ್ಥನೆ ಮಾಡಿದರು. ಈಲ್ಲಾ ಉಪಾಧ್ಯಕ್ಷ ಸುಲೈಮಾನ್ ಮುಸ್ಲಿಯಾರ್ ಹ್ಯಾಂಡ್‌ಪೋಸ್ಟ್ ಸ್ವಾಗತಿಸಿದರು. ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಸ್ವಾಧಿಕ್ ಅರ್ಹರಿ ಕೊಪ್ಪ ಉದ್ಘಾಟಿಸಿದರು.

ಈ ಸಮಯದಲ್ಲಿ ಮೂಡಿಗೆರೆ ಜುಮಾ ಮಸೀದಿ ಅಧ್ಯಕ್ಷ ಎಂ.ಎ. ಹಮ್ಮಬ್ಬ, ಇಸ್ಮಾಯೀಲ್ ಮೂಡಿಗೆರೆ, ಎಸ್ಕೆಎಸ್ಸೆಸ್ಸೆಫ್ ತಾಲೂಕು ಅಧ್ಯಕ್ಷ ಸಿರಾಜುದ್ದೀನ್ ಮೂಡಿಗೆರೆ, ಸಲಾಂ ಬಣಕಲ್, ಹಕೀಂ ಚಕ್ಕಮಕ್ಕಿ, ಶಿಹಾಬುದ್ದೀನ್ ಮೂಡಿಗೆರೆ, ಬಿ.ಅಹ್ಮದ್ ಮೂಡಿಗೆರೆ, ಹಾಜಬ್ಬ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News