×
Ad

ಗಣಿಗಾರಿಕೆಗೆ ಅವಕಾಶಕ್ಕಾಗಿ ಒತ್ತಾಯ: 8ನೆ ದಿನಕ್ಕೆ ಮುಂದುವರೆದ ಧರಣಿ

Update: 2017-05-24 17:41 IST

ಹಾಸನ, ಮೇ 24: ನಿಯಮಾನುಸಾರ ಗಣಿಗಾರಿಕೆ ಮಾಡಲು ಅವಕಾಶ ಕೊಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸಲಾಗುತ್ತಿರುವ ಧರಣಿ 8ನೇ ದಿನವು ಮುಂದುವರೆದಿದ್ದು, ಅಸ್ವಸ್ಥರಾದ ವೃದ್ಧರು ದರಣಿ ಸ್ಥಳದಲ್ಲೇ ಮಲಗಿರುವುದು ಕಂಡು ಬಂದಿತು.

ಕಾನೂನು ಬದ್ಧ ಗಣಿಗಾರಿಕೆಗೆ ಕೆಲವರು ತಡೆ ಮಾಡಿ ನಮಗೆ ಕಿರುಕುಳ ನೀಡಿ ಬೆದರಿಕೆ ಹಾಕುತ್ತಿದ್ದಾರೆ. ನ್ಯಾಯಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಕಳೆದ 7 ದಿನದಿಂದ ಧರಣಿ ನಡೆದರೂ ಇದುವರೆಗೂ ಸಂಬಂಧಪಟ್ಟವರು ಸ್ಪಂದಿಸಿರುವುದಿಲ್ಲ ಎಂದು ಧರಣಿ ನಿರತರು ದೂರಿದರು.

ಅರಸೀಕೆರೆ ತಾಲೂಕು ಹೆಬ್ಬಾರನಹಳ್ಳಿ ಗ್ರಾಮದಲ್ಲಿ ಮೂರು ಎಕರೆ ಜಮೀನನ್ನು ಷರೀಫ್ ಉನ್ನೀಸಾ ಎಂಬುವರ ಹೆಸರಿನಲ್ಲಿದ್ದು, ಇಲ್ಲಿ ಗಣಿಗಾರಿಕೆ ನಡೆಸಲು ಕೆಲವು ವ್ಯಕ್ತಿಗಳು ತಡೆದು, ಹಿಂಸೆ ನೀಡುತ್ತಿರುವುದಾಗಿ ಆರೋಪಿಸಿ ಷರೀಫ್ ಉನ್ನೀಸಾ ಕುಟುಂಬ ಕಳೆದ 7 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿದೆ. ನಿರಂತರವಾಗಿ ಧರಣಿ ನಡೆಸುವುದರಿಂದ ಉನ್ನೀಸಾ ಕುಟುಂಬದ ಹಿರಿಯ ವ್ಯಕ್ತಿಗಳು ತೀವ್ರವಾಗಿ ಅಸ್ವಸ್ಥರಾಗಿದ್ದು, ಅವರು ಧರಣಿ ನಿರತ ಸ್ಥಳದಲ್ಲೇ ಮಲಗಿದ್ದಾರೆ. ಉನ್ನೀಸಾ ಕುಟುಂಬವು ನಮಗೆ ನ್ಯಾಯ ಬೇಕು ಎಂದು ನಿರಂತರವಾಗಿ ಸರಕಾರವನ್ನು ಒತ್ತಾಯಿಸಿದ್ದಾರೆ.

ಧರಣಿಯಲ್ಲಿ ಜಮೀನಿನ ಮಾಲೀಕ ಷರೀಫ್ ಉನ್ನೀಸಾ, ಅತೀಫ್ ಪಾಷ,  ಮುಹಮ್ಮದ್ ಫಝಲ್, ಅಪ್ಸರ್ ಅಹಮದ್, ಆಲಿ, ರಫಿಕ್ ಯಾದಗರ್ ಹಾಗೂ ಇತರರು ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News