×
Ad

​ಸಿಡಿಲು ಬಡಿದು ರೈತ ಸಾವು

Update: 2017-05-24 22:36 IST

ಮುಂಡಗೋಡ, ಮೇ 24: ಸಿಡಿಲು ಬಡಿದು ರೈತನೊಬ್ಬ ಸಾವನ್ನಪ್ಪಿದ ಘಟನೆ ತಾಲೂಕಿನ ಬಾಚಣಕಿ ಜಲಾಶಯದ ಹತ್ತಿರ ಮಂಗಳವಾರ ಸಂಜೆ ಸಂಭವಿಸಿದೆ.


 ಮೃತಪಟ್ಟ ರೈತ ಮಜ್ಜ್ಜಿಗೇರಿ ಗ್ರಾಮದ ಹನ್ಮಂತಪ್ಪ ಸಿದ್ದಪ್ಪ ನೂಲ್ವಿ(50) ಎಂದು ತಿಳಿದು ಬಂದಿದೆ. ಪ್ರತಿದಿನವೂ ಈತ ತನ್ನ ಗದ್ದೆಗೆ ಕುರಿಗಳೊಂದಿಗೆ ಹೋಗುತ್ತಿದ್ದನು ಎನ್ನಲಾಗಿದೆ ಕುರಿಗಳನ್ನು ಮೇಯಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ವೇಳೆ ಬಾಚಣಕಿ ಡ್ಯಾಂ ಹತ್ತಿರ ಈತನಿಗೆ ಸಿಡಿಲು ಬಡಿದಿದೆ. ಸಿಡಿಲಿನ ಆಘಾತಕ್ಕೆ ರೈತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಅಶೋಕ ಗುರಾಣಿ, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕ ಆತ್ಮಹತ್ಯೆ ಕಾರವಾರ, ಮೇ 24: ಇಲ್ಲಿಗೆ ಸಮೀಪದ ಶಿರವಾಡ ಯುವಕನೊಬ್ಬ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಬಂಗಾರಪ್ಪನಗರದ ನಿವಾಸಿ ಪರಶುರಾಮ ಗೋಪಾಲ ವಡ್ಡರ (25) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತನ ವಿರುದ್ಧ ಗೋವಾ ಹಾಗೂ ಕಾರವಾರ ಗ್ರಾಮೀಣ ಠಾಣೆಯಲ್ಲಿ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಿವೆ ಎನ್ನಲಾಗಿದೆ.

ಹೀಗಾಗಿ ನ್ಯಾಯಾಲ ಯದಿಂದ ವಿವಿಧ ಕೇಸುಗಳ ವಾರಂಟ್ ಸಹ ಜಾರಿಯಾಗಿತ್ತು. ಇದರಿಂದ ಜಿಗುಪ್ಸೆ ಹೊಂದಿ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ಪರಶುರಾಮನ ತಾಯಿ ಶಾಂತವ್ವ ವಡ್ಡರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News