ಕಾರು ಢಿಕ್ಕಿ: ಮಗು ಮೃತ್ಯು
Update: 2017-05-24 23:30 IST
ಮಂಡ್ಯ, ಮೇ 24: ಕಾರು ಢಿಕ್ಕಿಯೊಡೆದು ರಸ್ತೆ ಬದಿ ಆಟವಾಡುತ್ತಿದ್ದ ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಮೈಸೂರು-ಚನ್ನರಾಯಪಟ್ಟಣ ರಸ್ತೆಯಲ್ಲಿರುವ ರಂಗನತಿಟ್ಟಿನ ಬಳಿ ಬುಧವಾರ ನಡೆದಿದೆ.
ರಂಗನತಿಟ್ಟು ಬಡಾವಣೆಯಲ್ಲಿ ವಾಸವಾಗಿರುವ ಪೂರ್ಣೀಮಾ ಮಂಜಶೆಟ್ಟಿ ಎಂಬವರ ಪುತ್ರಿ ಶ್ರೇಯಾ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಮಗು ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನ ಚಾಲಕ ತಮಿಳುನಾಡು ಮೂಲದ ಕಮಲಾ ಕಣ್ಣನ್ ವಿರುದ್ಧ ಕಿಕ್ಕೇರಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.