×
Ad

ಬೆಳಗಾವಿಯಲ್ಲಿ ಚುನಾವಣೆಗೆ ಸ್ಪರ್ಧಿಸುವವರು ಕನ್ನಡಿಗರೆಂದು ಬರೆದುಕೊಡಿ: ರೋಷನ್ ಬೇಗ್

Update: 2017-05-25 19:30 IST

ಬೆಂಗಳೂರು, ಮೇ 25: ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಅವಹೇಳನಕಾರಿಯಾಗಿ ನಿಂದಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್, ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಾವು ಕನ್ನಡಿಗರೆಂದು ಬರೆದುಕೊಡುವ ಕಾನೂನು ಜಾರಿಗೊಳಿಸಲು ಚಿಂತಿಸಲಾಗಿದೆ ಎಂದಿದ್ದಾರೆ.

ಗುರುವಾರ ನಗರದ ರಾಜಭವನ ರಸ್ತೆಯ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ಉರ್ದು ಅಕಾಡಮಿಯು ವೌಲಾನ ಸರ್.ಸಯ್ಯದ್ ಅಹ್ಮದ್ ಖಾನ್ ಅವರ 200ನೆ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ‘ಪ್ರಸ್ತುತ ಭಾರತದ ಶಿಕ್ಷಣದ ವ್ಯವಸ್ಥೆ’ ಕುರಿತ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಪಾಲ್ಗೊಂಡ ಬಳಿಕ ಅವರು ಪತ್ರಿಕೆಯೊಂದಿಗೆ ಮಾತನಾಡಿದರು.

ಅಖಂಡ ಕರ್ನಾಟಕ ನಾಡಿನಲ್ಲಿ ಜೈ ಮಹಾರಾಷ್ಟ್ರ ಎಂದು ಕೂಗುವುದು ಅಪರಾಧ ಹಾಗೂ ಕನ್ನಡಿಗರನ್ನು ಅವಮಾನಿಸುವ ಒಂದು ಪರಿಯಾಗಿದೆ. ಹೀಗಾಗಿ, ಬೆಳಗಾವಿಯಲ್ಲಿ ಗ್ರಾಮ ಪಂಚಾಯಿತಿ ಸೇರಿ ಮೇಯರ್ ಸ್ಥಾನದವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಜೊತೆಗೆ ನಾವು ಕನ್ನಡಿಗರೆಂದು ಬರೆದುಕೊಡಬೇಕು.ಈ ನಿಟ್ಟಿನಲ್ಲಿ ಕಾಯ್ದೆಯನ್ನೆ ರಚನೆ ಮಾಡಲಾಗುವುದೆಂದು ರೋಷನ್ ಬೇಗ್ ಹೇಳಿದರು.

ಶಿವಸೇನೆ ರಾಜಕೀಯಕ್ಕಾಗಿ ಏನು ಮಾಡಿದೆ ಎಂದು ಎಲ್ಲರಿಗೂ ಗೊತ್ತಿದೆ. ಅಲ್ಲದೆ, ಮುಂಬೈನಲ್ಲಿ ಕನ್ನಡಿಗರ ಮೇಲೆ ನಡೆದ ದೌರ್ಜನ್ಯ, ಹಲ್ಲೆ ನಾವು ಇನ್ನೂ ಮರೆತಿಲ್ಲ. ಕರ್ನಾಟಕದಲ್ಲೂ ರಾಜಕೀಯ ಮಾಡಲು ಬಂದರೆ ನಾವು ಸುಮ್ಮನೆ ಬಿಡುವುದಿಲ್ಲ ಎಂದು ಕಿಡಿಕಾರಿದರು.

‘ನನ್ನ ವಿರುದ್ಧ ಯಾವುದೋ ಒಂದು ಪತ್ರಿಕೆಯಲ್ಲಿ(ಸಾಮ್ನಾ) ಬರೆದರೆ ಏನೂ ಅಗಲ್ಲ. ನಾನು ಡಿಎನ್‌ಎ ಪರೀಕ್ಷೆ ಮಾಡಿಸಿಕೊಳ್ಳಬೇಕು ಎನ್ನುವ ಆತನೇ ಮೊದಲು ಡಿಎನ್‌ಎ ಪರೀಕ್ಷೆ ಮಾಡಿಸಿಕೊಳ್ಳಲಿ. ಈ ನಾಡಿನ ಗಡಿ ರಕ್ಷಣೆಗೆ ನಾನು ಬದ್ಧ’

-ರೋಷನ್ ಬೇಗ್,ಸಚಿವ, ರಾಜ್ಯ ನಗರಾಭಿವೃದ್ಧಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News