ನೀರು ತರಲು ತೆರಳಿದ್ದ ದಲಿತ ಮಹಿಳೆಯ ಜಾತಿನಿಂದನೆ: ದೂರು
Update: 2017-05-25 22:56 IST
ಹನೂರು, ಮೇ 25: ಕುಡಿಯುವ ನೀರು ತರಲು ತೆರಳಿದ್ದ ದಲಿತ ಮಹಿಳೆಯೋರ್ವರ ಜಾತಿನಿಂದನೆ ನಡೆಸಿದ ಘಟನೆ ನಡೆದಿದೆ.
ಇಲ್ಲಿನ ನಿವಾಸಿ ಮುನಿಯಮ್ಮ ಎಂಬವರು ನೀರು ತರಲು ತೆರಳಿದ್ದು, ಈ ಸಂದರ್ಭ ನಡೆದ ಜಗಳದಲ್ಲಿ ಜಾತಿ ನಿಂದನೆ ನಡೆಸಲಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.