×
Ad

ದಾವಣಗೆರೆ: ಶೌಚಗುಂಡಿ ಸ್ವಚ್ಛಗೊಳಿಸಿದ ಕಾರ್ಮಿಕರು

Update: 2017-05-26 23:03 IST

ದಾವಣಗೆರೆ, ಮೇ 26: ಕಾರ್ಮಿಕರು ಮ್ಯಾನ್‌ಹೋಲ್ ತ್ಯಾಜ್ಯವನ್ನು ಸ್ವಚ್ಛಗೊಳಿಸುವುದು ನಿಷೇಧವಾಗಿದ್ದರೂ ಇಬ್ಬರು ಕಾರ್ಮಿಕರು ಬಕೆಟ್‌ನ ಮೂಲಕ ಮ್ಯಾನ್‌ಹೋಲ್‌ನ ತ್ಯಾಜ್ಯವನ್ನು ತೆಗೆದು ಹಾಕಿ ನಂತರ ಬಿದಿರಿನ ಕೋಲನ್ನು ಬಳಸಿ ಚೇಂಬರ್ ಸ್ವಚ್ಛಗೊಳಿಸಿದ ಘಟನೆ ನಗರದಲ್ಲಿ ಗುರುವಾರ ನಡೆದಿದೆ.

ನಗರದ ಪಿ.ಜೆ. ಬಡಾವಣೆಯಲ್ಲಿ ಕೆಇಬಿ ಕಾಂಪೌಂಡ್ ಹಿಂಭಾಗದ ಪಾಲಿಕೆಯ ಮಳಿಗೆಗಳ ಸಾಲಿನ ಮುಂಭಾಗದಲ್ಲಿ ಕಳೆದ ಕೆಲ ದಿನಗಳಿಂದ ಮ್ಯಾನ್ ಹೋಲ್ ಬ್ಲಾಕ್ ಆಗಿದ್ದರಿಂದ ಅದನ್ನು ಸರಿಪ ಡಿಸಲು ಕೂಲಿ ಹಣಕ್ಕೆ ಈ ಬಡ ಕಾರ್ಮಿಕರನ್ನು ಕೆಲಸಕ್ಕೆ ಹಚ್ಚಲಾಗಿತ್ತು. ಮ್ಯಾನ್‌ಹೋಲ್ ಸ್ವಚ್ಛಗೊಳಿಸುವ ಕೆಲಸವಿದ್ದರೆ ಅದಕ್ಕೆ ಪಾಲಿಕೆಯಲ್ಲಿ ಸಕ್ಕಿಂಗ್ ಯಂತ್ರಗಳಿವೆ.

ಎರಡು ಯಂತ್ರಗಳಲ್ಲಿ ಒಂದು ಯಂತ್ರ ದುರಸ್ಥಿಯಾಗದೆ ಅನೇಕ ತಿಂಗಳೇ ಕಳೆದಿವೆ. ಇನ್ನು ಉಳಿದ ಮತ್ತೊಂದು ಸಕ್ಕಿಂಗ್ ಯಂತ್ರ ಕಳುಹಿಸುವಂತೆ ಜನರು ಪಾಲಿಕೆ ಅಧಿಕಾರಿ, ಜನ ಪ್ರತಿನಿಧಿಗಳಿಗೆ ಕಾಡಿ, ಬೇಡಿದರಷ್ಟೇ ಅದನ್ನು ಕೊಡುತ್ತಾರೆ ಎಂಬ ಆರೋಪವಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News