×
Ad

​ವಿಷ ಸೇವಿಸಿ ಆತ್ಮಹತ್ಯೆ

Update: 2017-05-26 23:04 IST

ಚಿಕ್ಕಮಗಳೂರು, ಮೇ 26: ಅಡಿಕೆ ತೋಟಗಳು ಒಣಗಿ ಹೋದ ಹಿನ್ನೆಲೆಯಲ್ಲಿ ಬೇಸತ್ತು ಕೃಷಿಕರೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.


ಆತ್ಮಹತ್ಯೆ ಮಾಡಿಕೊಂಡ ಕೃಷಿಕನನ್ನು ಚಂದ್ರಪ್ಪ(52) ಎಂದು ಗುರುತಿಸಲಾಗಿದೆ. ಈತನಿಗೆ ಮೂವರು ಮದುವೆಯಾಗದ ಹೆಣ್ಣುಮಕ್ಕಳಿದ್ದರು. ಗಂಡು ಮಕ್ಕಳಿರಲಿಲ್ಲ. ಇತ್ತೀಚೆಗೆ ಬಿಸಿಲಿನ ಕಾರಣದಿಂದ ಅವರ ಅಡಿಕೆ ತೋಟದಲ್ಲಿನ ಅಡಿಕೆ ಮರಗಳು ಒಣಗಿ ಹೋಗಿದ್ದವು. ಆದರೆ ಯಾವುದೇ ಬ್ಯಾಂಕಿನಲ್ಲೂ ಸಾಲ ಪಡೆದಿರಲಿಲ್ಲ ಎನ್ನಲಾಗಿದೆ.


ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಪ್ರೇಮಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News