×
Ad

​ಸಾಲಬಾಧೆೆ: ರೈತ ಆತ್ಮಹತ್ಯೆ

Update: 2017-05-26 23:05 IST

ಚಿಕ್ಕಮಗಳೂರು, ಮೇ 26: ಸಾಲಬಾಧೆೆ ತಾಳಲಾರದೆ ರೈತರೋರ್ವರು ತಾನು ಧರಿಸಿದ್ದ ಟವೆಲ್‌ನಿಂದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಗಟಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಡಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.


ಆತ್ಮಹತ್ಯೆ ಮಾಡಿಕೊಂಡ ರೈತನನ್ನು ತಿಮ್ಮಪ್ಪ(68) ಎಂದು ಗುರುತಿಸಲಾಗಿದೆ. ಈತ ಸ.ನಂ.19/3ಪಿ1 ರಲ್ಲಿ 12 ಎಕರೆ ಜಮೀನು ಹೊಂದಿದ್ದರು. ಜಮೀನಿನಲ್ಲಿ ತೆಂಗು ಬೆಳೆದಿದ್ದರು. ನೀರಿಗಾಗಿ ಬೋರ್‌ವೆಲ್ ಕೊರೆಸಿದರೂ ನೀರು ಲಭಿಸಿರಲಿಲ್ಲ. ಜಮೀನು ಅಭಿವೃದ್ಧಿಗಾಗಿ ಯಗಟಿ ಕಾರ್ಪೊರೇಶನ್ ಬ್ಯಾಂಕಿನಲ್ಲಿ 1 ಲಕ್ಷ ರೂ.ಹಾಗೂ ಸ್ವಸಹಾಯ ಸಂಘದಿಂದ 1.20 ಲಕ್ಷ ರೂ.ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಮಳೆ ಇಲ್ಲದೆ, ಬೇಸಾಯಕ್ಕೆ ನೀರು ಸಾಲದೆ ಬೆಳೆಗಳು ಸರಿಯಾಗಿ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾಲಗಾರರ ಕಾಟ ತಾಳಲಾರದೆ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ತೋಟದ ಬದಿಯಲ್ಲಿ ಹೊಂಗೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮೃತನ ಪತ್ನಿ ಗಂಗಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News