ಸಾಲದ ಬಾದೆ: ರೈತ ಆತ್ಮಹತ್ಯೆ
Update: 2017-05-27 16:37 IST
ಕಡೂರು, ಮೇ.27: ಸಾಲದ ಭಾದೆ ತಾಳಲಾರದೇ ರೈತರೋರ್ವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಚನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮನಾಥಪುರ ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಹಾಲಪ್ಪ(52) ಎಂದು ಗುರುತಿಸಲಾಗಿದೆ.
ಪಡೆದ ಸಾಲ ಮರಳಿ ತೀರಿಸಲು ಸಾಧ್ಯವಾಗದ ನೋವಿನಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಕುಟುಂಬದ ಮೂಲಗಳು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.