ಕರವೇಯಿಂದ ಕೈಗಾರಿಕ ಪ್ರದೇಶದ ಕಾರ್ಖಾನೆ ಬಂದ್

Update: 2017-05-29 12:07 GMT

ಹಾಸನ, ಮೇ 29: ಹೊರರಾಜ್ಯ ಕಾರ್ಮಿಕರಿಂದ ಸ್ಥಳೀಯರ ಮೇಲಿನ ಹಲ್ಲೆ ಹಾಗೂ ಇಲ್ಲಿನವರಿಗೆ ಉದ್ಯೋಗ ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ನೇತೃತ್ವದಲ್ಲಿ ಕೈಗಾರಿಕ ಪ್ರದೇಶದಲ್ಲಿರುವ ಕಾರ್ಖಾನೆ ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು.

ಹೊರ ರಾಜ್ಯದಿಂದ ಉದ್ಯೋಗ ಹುಡುಕಿಕೊಂಡು ಬಂದು ನಗರ ಹಾಗೂ ಹೊರವಲಯ ಕೈಗಾರಿಕಾ ಪ್ರದೇಶದಲ್ಲಿ ಕನ್ನಡ ಭಾಷೆ ತಿಳಿಯದ ಜನರು ಕೆಲಸಕ್ಕೆ ಸೇರಿಕೊಂಡು ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ಸ್ಥಳೀಯ ಉದ್ಯೋಗಿಗಳ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ಖಂಡಿಸಿದರು. ಮದ್ಯಪಾನ ಹಾಗೂ ಗಾಂಜ ಸೇವನೆ ಮಾಡಿ ಗ್ರಾನೈಟ್ ಅಂಗಡಿಗಳು ಮತ್ತು ಕಾರ್ಖಾನೆಗಳ ಹೊರಗಡೆ ತಿರುಗಾಡುವವರ ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂದರು.

ಕಾರ್ಖಾನೆಗಳಲ್ಲಿ ಕನ್ನಡ ಭಾಷೆ ತಿಳಿಯದವರನ್ನು ಕೆಲಸದಿಂದ ತೆಗೆದು, ಕನ್ನಡಿಗರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಹಾಗೂ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕನ್ನಡಿಗರಿಗೆ ಸರಕಾರಿ ನಿಯಮಗಳನ್ನು ಅನುಸರಿಸಬೇಕು ಎಂದು ಆಗ್ರಹಿಸಿದರು. ಗ್ರಾನೈಟ್ ಅಸೋಸಿಯನ್ಸ್ ಅಧ್ಯಕ್ಷ  ಕೆ.ಎಂ. ರಾಜೇಗೌಡರಿಗೆ ಮನವಿ ಸಲ್ಲಿಸಲಾಯಿತು.

ಗ್ರಾನೈಟ್ ಅಸೋಸಿಯನ್ಸ್ ಅಧ್ಯಕ್ಷರು ಕೆ.ಎಂ. ರಾಜೇಗೌಡರು ಮಾತನಾಡಿದರು.

ಇದೆ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ಅಧ್ಯಕ್ಷ ಪ್ರೀತಮ್‌ಗೌಡ, ತಾಲೂಕು ಉಪಾಧ್ಯಕ್ಷ ರಘುಗೌಡ, ಜಿಲ್ಲಾ ಉಪಾಧ್ಯಕ್ಷ ಹರೀಶ್‌ಗೌಡ, ತಾಲೂಕು ಉಪಾಧ್ಯಕ್ಷ ರಘು ತೇಜೂರು, ಜೀವನ್, ಮಹಿಳಾ ಘಟಕದ ರೇಖಾಮಂಜುನಾಥ್, ಸರೋ ಜಮ್ಮ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News