×
Ad

​ಸಿಇಟಿ ಫಲಿತಾಂಶ ಪ್ರಕಟ; ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರತೀಕ್ ನಾಯಕ್ ಪ್ರಥಮ, ಸುಮಂತ್ ಹೆಗಡೆ ದ್ವಿತೀಯ

Update: 2017-05-30 11:18 IST

ಬೆಂಗಳೂರು, ಮೇ 30: ವೈದ್ಯಕೀಯ, ದಂತವೈದ್ಯಕೀಯ ಹಾಗೂ ಇಂಜನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‍ಗಳಿಗೆ ಪ್ರವೇಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಇಂದು ಪ್ರಕಟಗೊಂಡಿದ್ದು ,ಮಲ್ಲೇಶ್ವರಂನಲ್ಲಿರುವ ಕೆಇಎ ಕಚೇರಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌ ಫಲಿತಾಂಶ ಪ್ರಕಟಿಸಿದರು.

ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಅವರು ಸಿಇಟಿಯಲ್ಲಿ  ರ‍್ಯಾಂಕ್  ವಿಜೇತರ ವಿವರ ನೀಡಿದರು.

ಇಂಜಿನಿಯರಿಂಗ್‌ ವಿಭಾಗ ರ‍್ಯಾಂಕ್ ವಿಜೇತರ ವಿವರ 
ಪ್ರಥಮ : ಪ್ರತೀಕ್‌ ನಾಯಕ್ , ಎಕ್ಸ್ ಪರ್ಟ್‌  ಪಿಯು  ಕಾಲೇಜು ಮಂಗಳೂರು
ದ್ವಿತೀಯ : ಸುಮಂತ್ ಹೆಗಡೆ, ವಿವಿಎಸ್‌ ಸರ್ದಾರ್ ಪಟೇಲ್ ಕಾಲೇಜು ಬೆಂಗಳೂರು
ತೃತೀಯ ಅನಿರುದ್ಧ್ , ಆರ್ ವಿಪಿಯು  ಕಾಲೇಜು ಬೆಂಗಳೂರು  

ಬಿಎಸ್‍ಸಿ ಕೃಷಿ:

ಪ್ರಥಮ: ರಕ್ಷಿತಾ ರಮೇಶ, ಬೆಂಗಳೂರಿನ ಮಹಾವೀರ್ ಜೈನ್ ಪಿಯು ಕಾಲೇಜು
 ದ್ವಿತೀಯ: ಬೆಂಗಳೂರಿನ ದೆಹಲಿ ಪಬ್ಲಿಕ್ ಸ್ಕೂಲ್‍ನ ಸಂಕೀರ್ತ್‌ ಸದಾನಂದ್ 
 ತೃತೀಯ: ಅನನ್ಯ ಬಿ.ಸಿ., ಬೆಂಗಳೂರಿನ ಎಸ್.ವಿ.ಮಹಾವೀರ್ ಜೈನ್ ಕಾಲೇಜು
 ನಾಲ್ಕನೆ : - ಭರತ್‍ಕುಮಾರ್,ಮಂಗಳೂರಿನ ಆಳ್ವಾಸ್ ಪಿಯು ಕಾಲೇಜು
  ಐದನೆ : ಸೌಮ್ಯ ಶಶಿಧರ್ ಕಟ್ಟಿಮನಿ ಮಂಗಳೂರಿನ ಆಳ್ವಾಸ್ ಪಿಯು ಕಾಲೇಜು.

ಭಾರತೀಯ ವೈದ್ಯ ಪದ್ಧತಿ(ಐಎಸ್‍ಎಂಎಚ್):
ಪ್ರಥಮ:  ರಕ್ಷಿತಾ ರಮೇಶ್ ,ಬೆಂಗಳೂರಿನ ಮಹಾವೀರಜೈನ್ ಕಾಜು
ದ್ವಿತೀಯ: ವಿಕ್ಟರ್‌ ಥಾಮಸ್‌  , ವೈಷ್ಣವಿ ಚೇತನ್ ಪಿಯು ಕಾಲೇಜು ದಾವಣಗೆರೆ
ತೃತೀಯ: ಶಹೀನ್ ಪಿಯು  ಕಾಲೇಜು ಬೀದರ‍್ 
ನಾಲ್ಕನೇ : ಅನನ್ಯ ಬಿ.ಸಿ., ಎಸ್.ಬಿ.ಮಹಾವೀರ್ ಜೈನ್ ಕಾಲೇಜು
 ಐದನೇ ರ‍್ಯಾಂಕ್‌ : ಅನುಸೂಯ ಮಂಗಳೂರಿನ ಆಳ್ವಾಸ್ ಪಿಯು ಕಾಲೇಜು

ಪಶುವೈದ್ಯಕೀಯ:
ಪ್ರಥಮ:ವಿಕ್ಟರ್ ಥಾಮಸ್ ವಿ,  ದಾವಣಗೆರೆಯ ವೈಷ್ಣವಿ ಚೇತನ್ ಪಿಯು ಕಾಲೇಜು .
ದ್ವಿತೀಯ: ರಕ್ಷಿತಾ ರಮೇಶ್ ,ಮಹಾವೀರಜೈನ್ ಕಾಲೇಜು ಬೆಂಗಳೂರು
ತೃತೀಯ:  ಭರತ್‍ಕುಮಾರ್ , ಮಂಗಳೂರಿನ ಆಳ್ವಾಸ್ ಪಿಯು ಕಾಲೇಜು
ನಾಲ್ಕನೇ: ನಾಸೀರ‍್ ಹುಸೈನ್‌ , ಶಹೀನ್ ಪಿಯು  ಕಾಲೇಜು ಬೀದರ‍್ 
ಐದನೇ : ಎಸ್.ಮೋಹಿತ್ , ನಾರಾಯಣ ಪಿಯು ಕಾಲೇಜು ಬೆಂಗಳೂರು

ಔಷಧಿ ವಿಜ್ಞಾನ (ಫಾರ್ಮಸಿ):
ಪ್ರಥಮ: ಪ್ರತೀಕ್ ಎಸ್.ನಾಯಕ್,   ಎಕ್ಸ್‍ಪರ್ಟ್ ಪಿಯು ಕಾಲೇಜು ಮಂಗಳೂರು
ದ್ವಿತೀಯ:ಸುಮಂತ್ ಆರ್.ಹೆಗಡೆ,  ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು,ಬಸವೇಶ್ವರನಗರ
ತೃತೀಯ: ದೃವಶ್ರೀರಾಮ ,ದೀಕ್ಷಾ ಸಿಎಎಫ್‍ಎಲ್ ಪಿಯು ಕಾಲೇಜು  
ನಾಲ್ಕನೇ:  ತುಳಸಿಸಾಯಿಸಿರಿಚಂದನ, ನೆಹರು ಸ್ಮಾರಕ ವಿದ್ಯಾಲಯದ :ಬೆಂಗಳೂರು
ಐದನೆ : ಅನಿರುದ್ಧ್ ಎಸ್. ಆರ್.ವಿ. ಪಿಯು ಕಾಲೇಜು ಬೆಂಗಳೂರು 

ರಾಜ್ಯದ 404 ಕೇಂದ್ರಗಳಲ್ಲಿ 1,85,411 ಅಭ್ಯರ್ಥಿಗಳು ಸಿಇಟಿಗೆ ಅರ್ಜಿ ಸಲ್ಲಿಸಿದ್ದರು. ಮೇ 2 ಮತ್ತು 3ರಂದು ನಡೆದ ಸಿಇಟಿ ಪರೀಕ್ಷೆಯಲ್ಲಿ  1,80,508 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. , ಅರ್ಹತಾ ಪಟ್ಟಿಯಲ್ಲಿ ಸಿದ್ದಪಡಿಸಿದಂತೆ ಭಾರತೀಯ ವೈದ್ಯ ಪದ್ಧತಿ ಹಾಗೂ ಹೊಮಿಯೋಪಥಿ ಕೋರ್ಸ್‍ಗಳಿಗೆ 96642, ಇಂಜಿನಿಯರಿಂಗ್‍ಗೆ 1,25,860 ರ‍್ಯಾಂಕ್‌  ನೀಡಲಾಗಿದೆ.  ಕೃಷಿ ವಿಜ್ಞಾನ ಕೋರ್ಸ್‍ಗೆ 95,767 ಅಭ್ಯರ್ಥಿಗಳು, ಪಶುಸಂಗೋಪನೆ 94,488 ಅಭ್ಯರ್ಥಿಗಳು, ಬಿ ಮತ್ತು ಡಿ ಫಾರ್ಮ ಕೋರ್ಸ್‍ಗಳಿಗೆ 1,26,839 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ಹೆಚ್ಚಿನ ಮಾಹಿತಿ ಹಾಗೂ ಫಲಿತಾಂಶಕ್ಕಾಗಿ ವೆಬ್‍ಸೈಟ್ www.kea.kar.nic.in, www.cet.kar.nic.in ಮತ್ತು www.kar.results.nic.in ಸಂಪರ್ಕಿಸಬಹುದು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News