ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
Update: 2017-05-31 18:36 IST
ಚಿಕ್ಕಮಗಳೂರು, ಮೇ 31: ತರೀಕೆರೆ ತಾಲ್ಲೂಕಿನ ಅಂಗನವಾಡಿಗಳಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಆರ್ಜಿ ಆಹ್ವಾನಿಸಲಾಗಿದೆ.
ತರೀಕೆರೆ ತಾಲ್ಲೂಕಿನ ಅಂಗನವಾಡಿಯಲ್ಲಿ ಸಹಾಯಕಿಯರ ಹುದ್ದೆಗೆ ಶಿವನಿ 1, ಗಾಳಹಳ್ಳಿ,-2, ಕಾಳಿದಾಸನಗರ, ಗೊಣಗಿಲಕಟ್ಟೆ, ನಂದಿಹೊಸಳ್ಳಿ, ಮೆಣಸಿನಕಾಯಿ ಹೊಸಳ್ಳಿ, ಹುಲಿತಿಮ್ಮಾಪುರ, ಬಾವಿಕೆರೆ-2, ಅಮೃತಾಪುರ, ಕುಂಟಿನಮಡು, ಟಿ.ರಂಗಾಪುರ, ಶ್ಯಾನುಭೋಗನಹಳ್ಳಿ, ಬುಕ್ಕಾಂಬುಧಿ ಅಂಗನವಾಡಿಗಳಲ್ಲಿ ಸಹಾಯಕಿಯರ ಹುದ್ದೆಗಳಿದ್ದು, ಅರ್ಜಿಸಲ್ಲಿಸಲು ಜೂನ್ 30 ಕೊನೆಯ ದಿನ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿಶುಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಶ್ರೀರಾಮಬಡಾವಣೆ, ತರೀಕೆರೆ, ದೂ.ಸಂ.08261-222740 ಇವರನ್ನುಸಂಪರ್ಕಿಸಲುಪ್ರಕಟಣೆತಿಳಿಸಿದೆ.