ವಿಧಾನ ಮಂಡಲ ಅಧಿವೇಶನದ ಬಳಿಕ ಸಚಿವ ಸಂಪುಟದ ವಿಸ್ತರಣೆ: ಸಿಎಂ ಸಿದ್ದರಾಮಯ್ಯ
Update: 2017-06-01 11:33 IST
ಬೆಂಗಳೂರು, ಜೂ.1:"ವಿಧಾನ ಮಂಡಲದ ಜಂಟಿ ಅಧಿವೇಶನದ ಬಳಿಕ ಸಚಿವ ಸಂಪುಟದಲ್ಲಿ ಖಾಲಿ ಖಾಲಿ ಇರುವ ಸಚಿವ ಸ್ಥಾನಗಳ ಭರ್ತಿ ಮಾಡಲಾಗುವುದು "ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ "ಸಚಿವ ಸಂಪುಟದಲ್ಲಿ ಮೂರು ಸ್ಥಾನಗಳ ಖಾಲಿ ಇವೆ. ಅಧಿವೇಶನನದ ಬಳಿಕ ಭರ್ತಿ ಮಾಡುತ್ತೇನೆ. ಯಾರಿಗೆ ಸಚಿವ ಸ್ಥಾನವೆಂದು ನಾನೇ ನಿರ್ಧರಿಸುತ್ತೇನೆ" ಎಂದರು.
"ಡಾ.ಜಿ.ಪರಮೇಶ್ವರ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಅವರು ರಾಜೀನಾಮೆ ವಿಚಾರ ನನ್ನ ಬಳಿ ಚರ್ಚಿಸಿಲ್ಲ. ಗೃಹಖಾತೆ ಯಾರಿಗೆ ನೀಡುವುದೆಂದು ನಿಮ್ಮ ಬಳಿ ಹೇಳಲು ಸಾಧ್ಯವಿಲ್ಲ ”ಎಂದು ಸಿದ್ದರಾಮಯ್ಯ ನುಡಿದರು.
"ನಮ್ಮ ನಾಯಕತ್ವದಲ್ಲೇ ಚುನಾವಣೆ ಎದುರಿಸಲಾಗುವುದು. ಕೆಪಿಸಿಸಿ ಪದಾಧಿಕಾರಿಗಳ ನೇಮಕದಲ್ಲಿ ಯಾರಿಗೂ ಯಾವುದೇ ಅಸಮಾಧಾನ ಆಗಿಲ್ಲ.ಚುನಾವಣೆಯ ಬಳಿಕ ಮುಖ್ಯಮಂತ್ರಿಯ ಆಯ್ಕೆಯನ್ನು ಶಾಸಕಾಂಗ ಸಭೆ ನಿರ್ಧರಿಸಲಿದೆ "ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.