×
Ad

ಬಂಕ್ ಇದೆ, ಪೆಟ್ರೋಲ್ ಇಲ್ಲ!

Update: 2017-06-01 22:37 IST

ಸುಂಟಿಕೊಪ್ಪ,ಜೂ.1: ಮಾದಾಪುರದ ವಾಹನ ಚಾಲಕರ ಬಹುದಿನದ ಬೇಡಿಕೆಯಾದ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿದೆ. ಮೊದಲು ಈ ಪೆಟ್ರೋಲ್ ಬಂಕ್ ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸುತ್ತಿತ್ತು. ಆದರೆ, ಇತ್ತೀಚೆಗೆ ಕೆಲ ದಿನಗಳಿಂದ ವಾಹನ ಚಾಲಕರು ಪೆಟ್ರೋಲ್, ಡಿಸೇಲ್‌ಗೆ ಬಂಕ್‌ಗೆ ತೆರಳಿದರೆ ಆಶ್ಚರ್ಯ ಕಾದಿರುತ್ತದೆ.

ಪೆಟ್ರೋಲ್,ಡೀಸೆಲ್ ಬಂದಿಲ್ಲ ಎಂಬ ಹಾರಿಕೆ ಉತ್ತರ ಸಿಗುತ್ತಿದೆ. ವಾರದಲ್ಲಿ 2,3 ದಿನಗಳೂ ಪೆಟ್ರೋಲ್ ಇರುವುದಿಲ್ಲ . ಇಂತಹ ಪೆಟ್ರೋಲ್ ಬಂಕ್ ಏತಕ್ಕಾಗಿ ಪ್ರಾರಂಭಿಸಲಾಗಿದೆಯೋ ಎಂದು ವಾಹನ ಚಾಲಕರು ಹಿಡಿ ಶಾಪ ಹಾಕುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News