×
Ad

​ಕೌಶಿಕ್‌ಗೆ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ-2016

Update: 2017-06-02 22:28 IST

ತೀರ್ಥಹಳ್ಳಿ, ಜೂ.2: ಹಿಂದೂಸ್ಥಾನ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಯುವ ಗಾಯಕ ತೀರ್ಥಹಳ್ಳಿಯ ಕೌಶಿಕ್ ಐತಾಳ್‌ಅವರಿಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ 2016ರ ಪ್ರಶಸ್ತಿ ದೊರೆತಿದೆ.

ನವದಿಲ್ಲಿಯ ಕೇಂದ್ರ ಸಂಗೀತ ನಾಟಕ ಅಕಾಡಮಿಯವರು ಕಳೆದ 11 ವರ್ಷಗಳಿಂದ ಯುವ ಪ್ರತಿಭೆಗಳಿಗಾಗಿ ಈ ಪ್ರಶಸ್ತಿಯನ್ನು ಸಂಗೀತದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ನೀಡಲಾಗುತ್ತಿದೆ. ಮುಂದಿನ ತಿಂಗಳು ನವದಿಲ್ಲಿಯಲ್ಲಿ ನಡೆಯಲಿರುವ ಕೇಂದ್ರ ಸಂಗೀತ ನಾಟಕ ಅಕಾಡಮಿಯ ಸಮಾರಂಭದಲ್ಲಿ ರಾಷ್ಟ್ರಪತಿಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.


ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಕೌಶಿಕ್ ಐತಾಳ್ ಹಲವು ಸಂಗೀತಕಾರ್ಯಕ್ರಮಗಳನ್ನು ನೀಡುವುದರ ಮುಖಾಂತರ ಹೆಸರುವಾಸಿಯಾಗಿದ್ದು, ಇವರು ಹೆಸರಾಂತ ಹಿಂದೂಸ್ಥಾನಿ ಗಾಯಕ ಪಂಡಿತ್ ಪರಮೇಶ್ವರ ಹೆಗಡೆಯವರ ಶಿಷ್ಯರಾಗಿದ್ದಾರೆ.
ಕೌಶಿಕ್ ಐತಾಳ್ ಅವರು ತೀರ್ಥಹಳ್ಳಿಯ ಹೆಸರಾಂತ ವೈದ್ಯ ಎ.ವಿ.ಸತ್ಯನಾರಾಯಣ ಐತಾಳ್ ಹಾಗೂ ರಜನಿ ಐತಾಳ್ ಅವರ ಪುತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News