ಮಟ್ಕಾ ದಂಧೆ: ಎಂಟು ಜನರ ಸೆರೆ
ಶಿವಮೊಗ್ಗ, ಜೂ. 2: ಜಿಲ್ಲೆಯ ಶಿಕಾರಿಪುರ ತಾಲೂಕಿನ ವಿವಿಧೆಡೆ ಡಿಸಿಬಿ ಹಾಗೂ ಡಿಎಸ್ಬಿ ವಿಶೇಷ ಪೊಲೀಸ್ ತಂಡಗಳು ದಾಳಿ ನಡೆಸಿ ಎಂಟು ಜನರನ್ನು ಬಂಧಿಸಿ, ಲಕ್ಷಾಂತರ ರೂ. ನಗದು ವಶಕ್ಕೆ ಪಡೆದಿರುವ ಘಟನೆ ಶುಕ್ರವಾರ ವರದಿಯಾಗಿದೆ.
ಖಚಿತ ವರ್ತಮಾನದ ಮೇರೆಗೆ ಶಿಕಾರಿಪುರ, ಶಿರಾಳಕೊಪ್ಪ ಹಾಗೂ ಆನವಟ್ಟಿಯ ಅನೇಕ ಕಡೆಗಳಲ್ಲಿ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದೆ. ಬಂಧಿತ ಆರೋಪಿಗಳಿಂದ ಸುಮಾರು 1 ಲಕ್ಷ ರೂ. ನಗದನ್ನು ವಶಕ್ಕೆ ಪಡೆದುಕೊಂಡಿದೆ. ಈ ಸಂಬಂಧ ಶಿವಮೊಗ್ಗ ನಗರದ ಡಿಸಿಬಿ ವಿಶೇಷ ಪೊಲೀಸ್ ಠಾಣೆಯಲ್ಲಿ ಎಂಟು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ನಾಲ್ವರು ನಕ್ಸಲರ ಶರಣಾಗತಿಗೆ ತಯಾರಿ
ಚಿಕ್ಕಮಗಳೂರು, ಜೂ.2: ಅಜ್ಞಾತವಾಸಕ್ಕೆ ಅಂತ್ಯ ಹಾಡಲು ಉತ್ತೇಜಿತರಾಗಿರುವ ನಾಲ್ವರು ಶಂಕಿತ ನಕ್ಸಲರ ತಂಡ ಪೊಲೀಸ್ ಇಲಾಖೆಯ ಎದುರು ಶರಣಾಗಲು ಸಜ್ಜಾಗಿದೆ.
ಕಳೆದ 11 ವರ್ಷಗಳಿಂದ ಸರಕಾರಕ್ಕೆ ಬೇಕಾಗಿದ್ದ ಚಿಕ್ಕಮಗಳೂರಿನ ಮುಂಡಗಾರು ಲತಾ, ಬಿ.ಜಿ.ಕೃಷ್ಣಮೂರ್ತಿ, ಹೊಸಗದ್ದೆ ಪ್ರಭಾ, ವಿಕ್ರಮ್ ಗೌಡ ಎಂಬ ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬರಲು ಪತ್ರ ಬರೆದು ಶಾಂತಿಗಾಗಿ ನಾಗರಿಕ ವೇದಿಕೆ ಜೊತೆ ಮಾತುಕತೆ ನಡೆಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸಮಾಜದ ಮುಖ್ಯವಾಹಿನಿಗೆ ಬರಲು ತಯಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಕೆಲವೇ ದಿನಗಳಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಎದುರು ಶರಣಾಗುವ ಸಾಧ್ಯತೆ ಇದೆ ಎಂದು ಸುದ್ದಿಮೂಲಗಳಿಂದ ತಿಳಿದು ಬಂದಿದೆ.