×
Ad

ಬೈಕ್‌ಗಳ ಮುಖಾಮುಖಿ ಢಿಕ್ಕಿ: ವ್ಯಕ್ತಿ ಮೃತ್ಯು

Update: 2017-06-02 22:35 IST

ಕುಶಾಲನಗರ, ಜೂ.2: ಸಮೀಪದ ಗುಡ್ಡೆಹೊಸೂರು ಬಳಿ ಎರಡು ಬೈಕ್‌ಗಳ ನಡುವೆ ನಡೆದ ಢಿಕ್ಕಿಯಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಬೊಳ್ಳೂರು ಗ್ರಾಮದ ನಿವಾಸಿ ಪುಟ್ಟಯ್ಯ ಎಂಬವರ ಮಗ ಕುಮಾರ್ (35) ಎಂಬಾತನೆ ಮೃತಪಟ್ಟ ವ್ಯಕ್ತಿ.
  ಗುಡ್ಡೆಹೊಸೂರಿನಿಂದ ಹಾರಂಗಿ ರಸ್ತೆ ಮೂಲಕ ಬೊಳ್ಳೂರಿಗೆ ತನ್ನ ಬೈಕ್‌ನಲ್ಲಿ (ಕೆಎ 12, ಎಚ್ 9855)ಕುಮಾರ್ ಹೋಗುತ್ತಿದ್ದ ಸಂದಭರ್ ಗುಡ್ಡೆಹೊಸೂರುಗೆ ಬರುತ್ತಿದ್ದ ಅರುಣ್ ಎಂಬಾತನ ಬೈಕ್ ( ಕೆ.ಎ 12 ಜೆ 2238) ನಡುವೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಢಿಕ್ಕಿಯಿಂದ ತೀವ್ರ ಗಾಯಗೊಂಡ ಕುಮಾರ್ ಎಂಬಾತನನ್ನು ಕುಶಾಲನಗರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಉಮೇಶ್‌ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ. ಅರುಣ್‌ಗೂ ಸಣ್ಣಪುಟ್ಟ ಗಾಯಗಳಾಗಿದ್ದು ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News