ಅರಣ್ಯ ಇಲಾಖೆ: ಬೀಜದ ಉಂಡೆ ಅಭಿಯಾನಕ್ಕೆ ಚಾಲನೆ

Update: 2017-06-03 12:57 GMT

ಸೊರಬ.ಜೂ,3: ಅರಣ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೇಲ್ಲರದ್ದಾಗಿದ್ದು, ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಎರಡೋಣಿ ತಿಳಿಸಿದರು.

ಶನಿವಾರ ಪಟ್ಟಣದ ಅರಣ್ಯ ಇಲಾಖೆ ಕಛೇರಿ ಆವರಣದಲ್ಲಿಇಲಾಖೆ ಅರಣ್ಯ  ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೀಜದ ಉಂಡೆ (ಸೀಡ್ ಬಾಲ್) ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ರಾಜ್ಯಾದ್ಯಾಂತ ವಿವಿಧ ಜಾತಿಗೆ ಸೇರಿದ ನೇರಲು, ತಾರೆ, ಹೊಂಗೆ, ನೆಲ್ಲಿ ಸೇರಿದಂತೆ ವಿವಿಧ ಬಗೆಯ ಬೀಜಗಳನ್ನು ಕೆಂಪು ಮಣ್ಣು, ಸೆಗಣಿ, ಗೋಮೂತ್ರ ಇವು ಮೂರನ್ನು ಮಿಶ್ರಣ ಮಾಡಿ, ಉಂಡೆಗಳನ್ನು ತಯಾರಿಸಿ ಪ್ರತಿ ಉಂಡೆಯೊಳಗೆ ಬೀಜಗಳನ್ನು ಹಾಕಿ ಒಂದು ದಿನ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ತಯಾರಿಸಿದ ಉಂಡೆಗಳನ್ನು ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳು ಹಾಗು ಶಾಲಾ ಮಕ್ಕಳೂಂದಿಗೆ ಪರಿಸರ ದಿನಾಚರಣೆಯಂದು ತಾಲ್ಲೂಕಿನಲ್ಲಿರುವ ಕಾಡುಗಳಿಗೆ ತೆರಳಿ ಮಳೆ ಆರಂಭದ ದಿನಗಳಂದು ಪ್ರಸರಣ ಮಾಡಲಾಗುತ್ತದೆ.

ಸೊರಬ ವಲಯ ವ್ಯಾಪ್ತಿಗೆ 10 ಸಾವಿರ ಬೀಜದ ಉಂಡೆಗಳು ಹಾಗು ಆನವಟ್ಟಿ ವಲಯದ ವ್ಯಾಪ್ತಿಯಲ್ಲಿ 10ಸಾವಿರ ಸೇರಿದಂತೆ ಒಟ್ಟು 20 ಸಾವಿರ ಬೀಜದ ಉಂಡೆಗಳನ್ನು ತಯಾರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ ಅವರು ಈ ಕಾರ್ಯಕ್ರಮದ ಉದ್ದೇಶ ಸಾರ್ವಜನಿಕರಲ್ಲಿ ಮತ್ತು ಶಾಲಾ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದಂತಾಗುತ್ತದೆ ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳು ಬೀಜದ ಉಂಡೆ ತಯಾರಿಕೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಆರ್‌ಎಫ್‌ಒ ಅಜಯ ಕುಮಾರ್, ಉಪವಲಯ ಅರಣ್ಯಾಧಿಕಾರಿ ಸತ್ಯನಾರಾಯಣ, ಅರಣ್ಯ ರಕ್ಷಕ ಯುವರಾಜ್, ಶಿಕ್ಷಕರಾದ ಕಮಲಾಕರ, ಶಿವಮೂರ್ತಿ, ಯುವಹೋರಾಟ್ ವೇದಿಕೆಯ ಅಧ್ಯಕ್ಷ ಸುರೇಶ ಭಂಡಾರಿ ಪದಾಧಿಕಾರಿಗಳಾದ ನೆಮ್ಮದಿ ಸುಬ್ಬು, ನಾಗರಾಜ್ ಜೈನ್ (ಬಣ್ಣದ ಬಾಬು) ಜಿ.ಕೆರಿಯಪ್ಪ, ರವಿ ಗುಡಿಗಾರ್, ಸಂಜೀವ ಆಚಾರಿ ಮತ್ತಿತರರಿದ್ದರು.

 ಪಟ್ಟಣದ ಅರಣ್ಯ ಇಲಾಖೆ ಕಛೇರಿ ಆವರಣದಲ್ಲಿ ಅರಣ್ಯ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೀಜದ ಉಂಡೆ (ಸೀಡ್ ಬಾಲ್) ಅಭಿಯಾನಕ್ಕೆ ಎಸಿಎಫ್ ಶ್ರೀನಿವಾಸ್ ಎರಡೋಣಿ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News