ಹಳ್ಳಿಯ ಜನರ ಸ್ಥಿತಿಗತಿಗಳ ಬಗ್ಗೆ ಚರ್ಚೆ, ವಿಮರ್ಶೆ, ಆತ್ಮಾವಲೋಕನ ಅಗತ್ಯ: ಬಿ.ಬಿ.ನಿಂಗಯ್ಯ

Update: 2017-06-03 13:16 GMT

 ಚಿಕ್ಕಮಗಳೂರು, ಜೂ.3:  ಮೀಸಲಾತಿ 60ವರ್ಷ ನಂತರ ದಲಿತ ಸಮುದಾಯ ವಿಶೇಷವಾಗಿ ಹಳ್ಳಿಯ ಸಹೋದರರ ಸ್ಥಿತಿಗತಿಗಳ ಬಗ್ಗೆ ಚರ್ಚೆ, ವಿಮರ್ಶೆ, ಆತ್ಮಾವಲೋಕ ಅಗತ್ಯ ಎಂದು ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ನುಡಿದರು.


 ಅವರು ಶನಿವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪರಿಶಿಷ್ಟಜಾತಿ ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ನಗರದ ಸಾರಿಗೆ ಡಿಪೋ ಆವರಣದಲ್ಲಿ ಆಯೋಜಿಸಿದ್ದ ಚಿಕ್ಕಮಗಳೂರು ವಿಭಾಗಮಟ್ಟದ ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

   ಬಾಬಾಸಾಹೇಬ್ ಅಂಬೇಡ್ಕರ್ ಮೀಸಲಾತಿಯನ್ನು ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ರಂಗಗಳಲ್ಲಿ ಒದಗಿಸಿ ಸಾಮಾಜಿಕ ಸಮಾನತೆಗೆ ಸಹಕಾರಿಯಾದವರು. ಸಾವಿರಾರು ವರ್ಷಗಳ ಶೋಷಣೆಗೊಳಪಟ್ಟ ಜನರಿಗೆ ಉದ್ಯೋಗ ಮೀಸಲಾತಿ ಅನ್ವಯ ಸಿಕ್ಕ ನಂತರ ಅವರು, ಉಳ್ಳವರ ಜೊತೆಗೆ ಸಿಗಬಹುದಾದ ಸೌಲ್ಯಗಳಲ್ಲಿ ಕಾಲಕಳೆಯುತ್ತಿದ್ದಾರೆಂಬ ನೋವನ್ನು 1956ರಲ್ಲಿ ವ್ಯಕ್ತಪಡಿಸಿದ್ದರು. ಹಳ್ಳಿಯ ಸಹೋದರರಿಗೆ ಇದರಿಂದ ನಿರೀಕ್ಷಿತ ಪ್ರಯೋಜವಾಗಿಲ್ಲವೆಂಬ ಆತಂಕ ಇಂದೂ ಮುಂದುವರೆದಿದೆ ಎಂದರು.

 ಸುಮಾರು 40ವರ್ಷಗಳ ದಲಿತ ಸಂಘಟನೆಗಳು ಇಂದು ನಿಸ್ತೇಜವಾಗಿವೆ. ಹಿಂದಿನ ಪ್ರಖರತೆ ಕಳೆದುಕೊಂಡಿವೆ. ಎಲ್ಲರೂ ಪರಸ್ಪರ ಸಮಾಲೋಚಿಸಿ ಸಮಸ್ಯೆಗಳಿಗೆ ಸ್ಪಷ್ಟ ಕಾರ್ಯಕ್ರಮಗಳ ಮೂಲಕ ಉತ್ತರಕಂಡುಕೊಳ್ಳಬೇಕು. ಸರ್ಕಾರಗಳು ದಲಿತ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ.ಯೋಜನೆ ರೂಪಿಸಿದ್ದು, ಅವು ತಲುಪಬೇಕಾದವರಿಗೆ ತಲುಪುವಂತೆ ಮಾಡಬೇಕು ಎಂದ ನಿಂಗಯ್ಯ, ದಲಿತರ ಮೇಲಿನ ದೌರ್ಜನ್ಯಗಳು ಹಿಂದಿಗಿಂತಲೂ ಇಂದು ಹೆಚ್ಚಾಗಿದೆ. ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರದತ್ತ ಹೆಜ್ಜೆ ಹಾಕಬೇಕಾಗಿದೆ ಎಂದು ಅವರು ಹೇಳಿದರು.

:

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News