ದಸಂಸದಿಂದ ಶಿಕ್ಷಕರಿಗೆ ಸನ್ಮಾನ

Update: 2017-06-03 14:15 GMT

ಮಡಿಕೇರಿ ಜೂ. 3 : 2016-17 ನೇ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಮಡಿಕೇರಿಯ ಸರಕಾರಿ ಪ್ರೌಢಶಾಲೆಯು ಶೇ.91 ರಷ್ಟು ಫಲಿತಾಂಶ ಗಳಿಸಿದ್ದು,ಈ ಸಾಧನೆಗೆ ಕಾರಣಕರ್ತರಾದ ಶಾಲೆಯ ಶಿಕ್ಷಕರುಗಳನ್ನುಜೂ.9 ರಂದು ದಲಿತ ಸಂಘರ್ಷ ಸಮಿತಿಯಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಗುವುದು ಎಂದು ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ತಿಳಿಸಿದ್ದಾರೆ.
ಶಾಲಾ ಸಭಾಂಗಣದಲ್ಲಿ ಅಂದು ಬೆಳಗ್ಗೆ 11.30 ಕ್ಕೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಆಸ್ಪತ್ರೆಯಮುಖ್ಯ ಉಪವೈದ್ಯಾಧಿಕಾರಿಯಾದಡಾ.ದೇವದಾಸ್ ಉದ್ಘಾಟಸಲಿದ್ದು, ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಹೆಚ್.ಎಲ್.
ದಿವಾಕರ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.  ಮುಖ್ಯ ಭಾಷಣಕಾರರಾಗಿ ಜಿಲ್ಲಾ ನೇತ್ರ ತಜ್ಞರಾದಡಾ. ಎಸ್.ಸಿ.ಪ್ರಶಾಂತ್ ಮಾತನಾಡಲಿದ್ದು,ಮುಖ್ಯ ಅತಿಥಿಗಳಾಗಿ ಮಕ್ಕಳ ತಜ್ಞರಾದಡಾ. ಬಿ.ಸಿ.ನವೀನ್‌ಕುಮಾರ್ ಉಪಸ್ಥಿತರಿರುವರು.ಸಮಾಜ ಸೇವಕರಾದ ಎಸ್. ವಾಸುದೇವ್, ಸರಕಾರಿ ಪ್ರೌಢಶಾಲಾಭಿವೃದ್ಧಿ ಸಮಿತಿಯಅಧ್ಯಕ್ಷರಾದ ಚಂದ್ರ, ಪ್ರೌಢಶಾಲಾ ಉಪಪ್ರಾಂಶುಪಾಲರಾದ ಕೆ.ಪಿ.ಗುರುರಾಜ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
:: ಸನ್ಮಾನಿಸಲ್ಪಡುವವರು ::
ಉಪಪ್ರಾಂಶುಪಾಲರಾದ ಗುರುರಾಜ ಕೆ.ಪಿ, ಗಣಿತ ಶಿಕ್ಷಕರುಗಳಾದ ದೇವಮ್ಮ ಬಿ.ಎಮ್, ವಿಜಯಲಕ್ಷ್ಮಿ.ಕೆ, ಸೌಮ್ಯಲತಾ ಎಂ.ಡಿ, ಹಿಂದಿ ಶಿಕ್ಷಕರುಗಳಾದ ಸಿದ್ದೇಶ್ ಸಣ್ಣಗಿರಿ, ಗೀತಾ ಎಂ.ಎ, ಕನ್ನಡ ಶಿಕ್ಷಕರಾದ ಶಶಿಕಲಾ.ಕೆ.ವಿ, ಲೀನಾ ಸುಮಿತಾ ರೋಚ್, ಆಂಗ್ಲ ಶಿಕ್ಷಕರಾದ ಅನಿತಾ ಎಸ್.ಡಿ, ಸಂಗೀತಾ ಟಿ.ನಾಯ್ಕ, ಸಮಾಜ ವಿಜ್ಞಾನ ಶಿಕ್ಷಕರಾದ ಮಂದಾಕಿನಿ ಬಿ.ಪಿ, ಪುಷ್ಪ .ಡಿ ಹೆಚ್, ವಿಜ್ಞಾನ ಶಿಕ್ಷಕರಾದ ಜಾನೆಟ್ ಐ.ಜೆ, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀನಿವಾಸ, ವೃತ್ತಿ ಶಿಕ್ಷಣ ಶಿಕ್ಷಕರಾದ ಸೋಮಯ್ಯ ನಾಯ್ಕ, ಪ್ರಥಮ ದರ್ಜೆ ಸಹಾಯಕರುಗಳಾದಕುಮಾರ್ ಎಸ್.ಹೊನಾ್ಯಳ, ದ್ವೀತಿಯ ದರ್ಜೆ ಸಹಾಯಕರುಗಳಾದದೀಪ್ತಿ ಕ್ರಿಸ್ಟಿನಾ ಎಂ.ಜೆ ಹಾಗೂಲಲಿತ ಡಿ.ಎ. ಅವರುಗಳನ್ನು ಸನ್ಮಾನಿಸಲಾಗುವುದೆಂದುಹೆಚ್.ಎಲ್.ದಿವಾಕರ್ ತಿಳಿಸಿದ್ದಾರೆ.
ಪ್ರಸ್ತುತ ವರ್ಷದಿಂದ ಸರಕಾರಿ ಜೂನಿಯರ್ ಕಾಲೇಜುಗಳ ಸಾಧನೆಯನ್ನು ಕೂಡ ಗುರುತಿಸಿ ಪ್ರಾಧ್ಯಾಪಕರುಗಳನ್ನು ಸನ್ಮಾನಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News