×
Ad

ಶಿವಮೊಗ್ಗ: ಫಾಮಿದಾ ಪತಿ ಆಮಿರ್ ಸಾಬ್ ಸ್ಥಿತಿ ಗಂಭೀರ

Update: 2017-06-04 13:01 IST
ಶಿವಮೊಗ್ಗ, ಜೂ.4: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಸ್ಕಾನಿಂಗ್ ಕೊಠಡಿಗೆ ತೆರಳಲು ಸಿಬ್ಬಂದಿ ಸ್ಟ್ರೆಚರ್ ನೀಡಲು ನಿರಾಕರಿಸಿದ ಕಾರಣ ನೆಲದಲ್ಲಿ ತನ್ನ ಪತ್ನಿ ಫಾಮಿದಾರಿಂದ ಎಳೆದೊಯ್ಯಲ್ಪಟ್ಟಿದ್ದ 70ರ ವೃದ್ಧ ಆಮಿರ್ ಸಾಬ್ ಸ್ಥಿತಿ ಗಂಭೀರವಾಗಿದೆ. "ಮೆಗ್ಗಾನ್ ಆಸ್ಪತ್ರೆಯಲ್ಲಿ ಆಮಿರ್ ಸಾಬ್ ಗೆ ಸಿಟಿ ಸ್ಕಾನಿಂಗ್ ಮಾಡಲಾಗಿದ್ದು, ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ. ಅವರಿಗೆ ನರರೋಗ ಶಸ್ತ್ರಚಿಕಿತ್ಸಕ ವೈದ್ಯರಿಂದ ಚಿಕಿತ್ಸೆಯ ಅಗತ್ಯವಿದೆ'' ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ರಘುನಂದನ್ ಹೇಳಿದ್ದಾರೆ. ಖಾಸಗಿ ಆಸ್ಪತ್ರೆಗೆ ಶಿಫ್ಟ್: ಆಮಿರ್ ಸಾಬ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ಗೆ ತೆರಳಲು ವೈದ್ಯರು ರೆಫರ್ ಮಾಡಿದ್ದಾರೆ. ಆದರೆ, ಪತಿಯನ್ನು ಬೆಂಗಳೂರಿಗೆ ಕರೆದೊಯ್ಯಲು ಆಮಿರ್ ಸಾಬ್ ಪತ್ನಿ ಫಾಮಿದಾ ನಿರಾಕರಿಸಿದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಆಮಿರ್ ಸಾಬ್‌ಗೆ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಚಿಕಿತ್ಸೆಯ ವೆಚ್ಚವನ್ನು ಸ್ಥಳೀಯ ಶಾಸಕರು ಭರಿಸಲಿದ್ದಾರೆ ಎಂದು ಡಾ. ರಘುನಂದನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News