×
Ad

ಪಶುಭಾಗ್ಯ ಯೋಜನೆ: ಫಲಾನುಭವಿಗಳಿಗೆ ಸಾಯಧನ ವಿತರಣೆ

Update: 2017-06-04 17:03 IST

ತುಮಕೂರು.ಜೂ.4: ರಾಜ್ಯ ಸರಕಾರದ ಪಶು ಭಾಗ್ಯ ಯೋಜನೆಯಡಿ ತುಮಕೂರು ನಗರದ ಆಯ್ದ ಫಲಾನುಭವಿಗಳಿಗೆ 2016-17ನೇ ಸಾಲಿನ ಸರಕಾರದ ಸಹಾಯಧನವನ್ನು ಭಾನುವಾರು ತುಮಕೂರು ನಗರ ಕ್ಷೇತ್ರದ ಶಾಸಕ ಡಾ.ರಫೀಕ್ ಅಹಮದ್ ವಿತರಿಸಿದರು.
 
ಜಿಲ್ಲಾ ಪಶು ಆಸ್ಪತ್ರೆಯ ಆವರಣದಲ್ಲಿ 2016-17ನೇ ಸಾಲಿನ ಪಶು ಭಾಗ್ಯ ಯೋಜನೆಯಡಿ 30 ಜನ ಫಲಾನುಭವಿಗಳಿಗೆ 6.45 ಲಕ್ಷ ರೂ ಸಹಾಯಧನ ಮತ್ತು ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅಡಿಯಲ್ಲಿ 30 ಜನರಿಗೆ ತಲಾ 60 ಸಾವಿರ ರೂ ಸಹಾಯಧನವನ್ನು ಒಳಗೊಂಡ 18 ಲಕ್ಷ ರೂಗಳ ಚೆಕ್ ಹಾಗೂ ಅಮೃತ ಯೋಜನೆ ಅಡಿ ಕುರಿ, ಮೇಕೆ,ಕೋಳಿ ಕೊಳ್ಳಲು ವಿಧವೆಯರಿಗೆ ತಲಾ 7500 ರೂಗಳ ಸಹಾಯಧನವನ್ನು ಶಾಸಕರು ವಿತರಿಸಿದರು.

ಈ ವೇಳೆ ಮಾತನಾಡಿದ ಶಾಸಕ ಡಾ.ರಫೀಕ್ ಅಹಮದ್,ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಬಡವರ ಅಭ್ಯುದಯಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು,ಅವುಗಳಲ್ಲಿ ಪಶುಭಾಗ್ಯವೂ ಒಂದು.ಬರಗಾಲದಿಂದ ತತ್ತರಿಸಿರುವ ರೈತರಿಗೆ ಪಶುಭಾಗ್ಯ ಯೋಜನೆ ಅವರ ಅರ್ಥಿಕ ಪರಿಸ್ಥಿತಿ ಉತ್ತಮ ಪಡಿಸಿಕೊಂಡು, ಜೀವನ ನಡೆಸಲು ಸಹಕಾರಿಯಾಗಿದೆ. ತುಮಕೂರು ನಗರದಲ್ಲಿರುವ ರೈತರು, ಪಶು ಪಾಲಕರನ್ನು ಗುರುತಿಸಿ ಅವರಿಗೂ ಸಹ ಕುರಿ, ಕೋಳಿ, ಮೇಕೆ, ಮಿಶ್ರತಳಿ ಹಸುಗಳ ಖರೀದಿಗೆ ಸಹಾಯಧನ ನೀಡಲಾಗುತ್ತಿದೆ.ಪಶು ಪಾಲಕರು ಇದರ ಲಾಭ ಪಡೆದು ತಮ್ಮ ಬದುಕನ್ನು ಉತ್ತಮ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.


ಪಶು ಇಲಾಖೆಯ ತುಮಕೂರು ನಗರ ಸಹಾಯಕ ನಿರ್ದೇಶಕ ಡಾ.ಸಂಜೀವರಾಯ ಮಾತನಾಡಿ,ತುಮಕೂರು ನಗರದಲ್ಲಿರುವ 83 ಜನ ಪಶು ಸಾಕಾಣಿಕೆದಾರರನ್ನು ಗುರುತಿಸಿ ಸುಮಾರು 24.46 ಲಕ್ಷ ಸಹಾಯಧನವನ್ನು ನೀಡಲಾಗಿದೆ.ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ ಯೋಜನೆಯಡಿ ಪ್ರತಿ ಯೂನಿಟ್‌ಗೆ 1.20 ಲಕ್ಷ ಇದ್ದು, ಶೇ50ರ ಅಚಿದರೆ 60 ಸಾವಿರ ರೂಗಳ ಸಹಾಯ ನೀಡಿ ಎರಡು ವಿಶ್ರತಳಿ ಹಸುಗಳನ್ನು ಖರೀದಿಸಲು ಸಹಾಯಧನ ನೀಡಲಾಗಿದೆ. ಹೈನುಗಾರಿಕೆಯಿಂದ ಜೀವನ ಸಾಗಿಸಲು ಇದು ಸಹಕಾರಿಯಾಗಲಿದೆ ಎಂದರು.
ಈ ವೇಳೆ ಪಶುಭಾಗ್ಯ ಯೋಜನೆ ಫಲಾನುಭವಿ ಆಯ್ಕೆ ಸಮಿತಿಯ ಸದಸ್ಯರಾದ ಜಗದೀಶ್, ಶ್ರೀಮತಿ ಮಂಗಳಮ್ಮ, ಸೈಯದ್ ಮತ್ತು ಎಸ್.ಎಲ್.ಎನ್. ಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News