ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ಸು ಪಾಸ್ ಆಗ್ರಹಿಸಿ ಪ್ರತಿಭಟನೆ
Update: 2017-06-04 18:33 IST
ದಾವಣಗೆರೆ. ಜೂ,4: ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ಸು ಪಾಸ್ ನೀಡುವಂತೆ ಆಗ್ರಹಿಸಿ ಲ್ಲಿ ಸುವರ್ಣ ಕರ್ನಾಟಕ ವೇದಿಕೆ ರಾಜ್ಯ ಘಟಕ ಕಾರ್ಯಕರ್ತರು ಪ್ರತಿಭಟಿಸಿದರು. ಇಲ್ಲಿನ ಜಯದೇವ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಸರ್ಕಾರವು ವಿದ್ಯಾರ್ಥಿಗಳ ವಿಚಾರದಲ್ಲೂ ಜಾತಿ ಲೆಕ್ಕಾಚಾರ, ಬೇಧಭಾವ ಮಾಡುತ್ತಿರುವುದನ್ನು ಖಂಡಿಸಿ ಘೋಷಣೆ ಕೂಗಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಹಾಗೂ ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡುತ್ತಿರುವವರಿಗೆ ಉಚಿತ ಲ್ಯಾಪ್‌ಟಾಪ್ ನೀಡುವ ಸರ್ಕಾರದ ನಡೆ ವೇದಿಕೆ ಸ್ವಾಗತಿಸುತ್ತಿವೆ. ಅದರೆ, ಈ ಸೌಲಭ್ಯ ನೀಡುವಲ್ಲೂ ಜಾತಿ ಲೆಕ್ಕಾಚಾರ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದರು. ವೇದಿಕೆಯ ರಾಜ್ಯ ಗೌರವಾಧ್ಯಕ್ಷ ಮಹಾಂತೇಶ ವಿ. ಒಣರೊಟ್ಟಿ, ಮಂಜುನಾಥ ಗೌಡ , ಸಂತೋಷಕುಮಾರ, ಎಂ.ಪಿ. ಹಾಲಸ್ವಾಮಿ, ಪರಶುರಾಮ ನಂದಿಗಾವಿ, ಟಿ.ವಿ. ಮಂಜುನಾಥಗೌಡ, ಎಚ್. ಹನುಮಂತ, ಭೋಜರಾಜ, ಕಾರ್ತಿಕ್ ಗೌಡ, ಎಂ.ಜಿ. ಬಸವರಾಜಯ್ಯ, ಎಂ.ಎಸ್. ಪ್ರಕಾಶ, ಅಂಜಿನಪ್ಪ, ಟಿ. ಬಸವರಾಜ, ಅನಿಲ್, ಮಂಜುನಾಥ, ಗಿರೀಶ, ರಾಜು ಇದ್ದರು.