×
Ad

ಮಲ್ಲಮ್ಮ ಜಯಂತಿ ಆಚರಣೆ, ರಾಜ್ಯ ಸರ್ಕಾರ ನೀಡಿರುವ ಬಹುದೊಡ್ಡ ಕೊಡುಗೆ: ಶೇಖರ್‌ಗೌಡ ಮಾಲೀ ಪಾಟೀಲ್

Update: 2017-06-04 19:47 IST
ದಾವಣಗೆರೆ.ಜೂ,4 : ಪ್ರತಿವರ್ಷ ಮೇ 10 ರಂದು ಸರ್ಕಾರದ ವೆಚ್ಚದಲ್ಲಿಯೇ ಮಲ್ಲಮ್ಮ ಜಯಂತಿ ಆಚರಣೆ ಮಾಡುತ್ತಿರುವುದು ಸಮಾಜಕ್ಕೆ ರಾಜ್ಯ ಸರ್ಕಾರ ನೀಡಿರುವ ಬಹುದೊಡ್ಡ ಕೊಡುಗೆ ಎಂದು ಹೇಮರೆಡ್ಡಿ ಸಮಾಜದ ರಾಜ್ಯಾಧ್ಯಕ್ಷ ಶೇಖರ್‌ಗೌಡ ಮಾಲೀ ಪಾಟೀಲ್ ಹೇಳಿದರು. ನಗರದ ಜೆ.ಎಚ್.ಪಟೇಲ್ ಬಡಾವಣೆಯಲ್ಲಿರುವ ಸಮಾಜದ ವಿದ್ಯಾರ್ಥಿ ನಿಲಯ ಭಾನುವಾರ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಮಾಜದ ರಾಜ್ಯಮಟ್ಟದ ಪ್ರಥಮ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜ ಕಳೆದ ಒಂದು ದಶಕದಿಂದ ಇತ್ತೀಚೆಗೆ ಸಂಘಟನೆಗೊಳ್ಳುತ್ತಿದೆ.ಇಂಥಹ ಸಮಾಜದ ಅಭಿವೃದ್ಧಿಗೆ ಬಲವಾದ ಸಂಘಟನೆಯ ಅವಶ್ಯಕತೆಯನ್ನು ಸರ್ಕಾರದ ಗಮನಕ್ಕೆ ತಂದಾಗ ಸಮಾಜದವರೇ ಆದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ 5 ಕೋಟಿ ರೂ ವೆಚ್ಚದಲ್ಲಿ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠ ಸ್ಥಾಪಿಸಿ ಸಮಾಜದ ದೈವ ಮಲ್ಲಮ್ಮ ಅವರ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು. ವಿಶೇಷವಾಗಿ ಶ್ರೀ ಶೈಲ ಪೀಠ ಮತ್ತು ಪೀಠಾಧಿಪತಿಗಳಾದ ಶ್ರೀ ಡಾ. ಚನ್ನಸಿದ್ಧರಾಮ ಸಾಮೀಜಿಗಳ ನೇತೃತ್ವದಲ್ಲಿ ಸಮಾಜ ಮುನ್ನೆಡೆಯುತ್ತಿದೆ.ಸಂಘಟನೆ ವಿಚಾರದಲ್ಲಿ ಇನ್ನೂ ಸಾಕಷ್ಟು ಗೊಂದಲಗಳಿವೆ.ಶೀಘ್ರವೇ ಇವುಗಳನ್ನು ನಿವಾರಿಸಿಕೊಂಡು ಮತ್ತಷ್ಟು ಬಲವಾದ ಸಂಘಟನೆ ಮಾಡುವ ನಿಟ್ಟಿನಲ್ಲಿ ಮುನ್ನಡೆಯಲಾಗುವುದು ಎಂದರು. ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಅಧ್ಯಯನ ಪೀಠ ಸ್ಥಾಪನೆ ಮತ್ತು ಈ ವರ್ಷದಿಂದ ಸರ್ಕಾರಿ ವೆಚ್ಚದಲ್ಲಿಯೇ ಮಲ್ಲಮ್ಮರ ಜಯಂತಿ ಆಚರಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ಕಾರ್ಯ ಶ್ಲಾಘನೀಯ ಎಂದರು. ಸಾನಿಧ್ಯವನ್ನು ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಸ್ವಾಮೀಜಿ ವಹಿಸಿದ್ದರು. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್,ಜಿಲ್ಲಾಧ್ಯಕ್ಷ ಡಾ.ಕೊಟ್ರಪ್ಪ,ಡಾ.ಶಿವಲಿಂಗ ಮೂರ್ತಿ,ದೂಡಾ ಅಧ್ಯಕ್ಷ ರಾಮಚಂದ್ರಪ್ಪ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News