ಎಂಇಎಸ್ ಮುಖಂಡನಿಗೆ ಜಾಮೀನು ಮಂಜೂರು
Update: 2017-06-04 22:01 IST
ಬೆಳಗಾವಿ, ಜೂ.4: ನಾಡದ್ರೋಹಿ ಆರೋಪದ ಹಿನ್ನೆಲೆಯಲ್ಲಿ ಬಂಧಿತನಾಗಿದ್ದ ಎಂಇಎಸ್ ಮುಖಂಡನಿಗೆ ಬೆಳಗಾವಿ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಎಂಇಎಸ್ ಮುಖಂಡ ಹಾಗೂ ಬಂಧಿತ ಆರೋಪಿ ಅಮರ್ ಯಳ್ಳೂರಕರಗೆ ಜಾಮೀನು ಸಿಕ್ಕಿದೆ. ನಾಡದ್ರೋಹಿ ಘೋಷಣೆ ಕೂಗಿದವರ 7 ಜನರಲ್ಲಿ ಅಮರ್ ಕೂಡ ಒಬ್ಬನಾಗಿದ್ದ. ಮದನ ಭಾವಣೆ, ಸೂರಜ ಕಣಬರಕರ, ಅಮರ ಯಳ್ಳೂರಕರ, ಗಜಾನಂದ ದಡ್ಡಿಕರ ಹಾಗೂ ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್ ಚಾಲಕ ಪ್ರಮೋದ ಗಾಯಕವಾಡ, ನಿರ್ವಾಹಕ ದೇವಿದಾಸ ಬೋರಾಟ ಸೇರಿದಂತೆ ಏಳು ಜನರ ಗುಂಪು ಬಸ್ ನಿಲ್ದಾಣದಲ್ಲಿ ಪುಂಡಾಟ ನಡೆಸಿತ್ತು ಈ ಸಂಬಂಧ ಬೆಳಗಾವಿಯ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಕಲಂ 143, 147, 153(ಎ) ಸಹಕಲಂ 149 ಐಪಿಸಿ ಅಡಿಯಲ್ಲಿ ಕೇಸು ದಾಖಲಿಸಿ ಅಮರ್ ಯಳ್ಳೂರಕರೆ ಸೇರಿ 7 ಜನರನ್ನು ಬಂಧಿಸಲಾಗಿತ್ತು. ಅವರಲ್ಲಿ ಒಬ್ಬರಾದ ಅಮರ್‌ಗೆ ಜಾಮೀನು ಮಂಜೂರು ಮಾಡಲಾಗಿದೆ.