×
Ad

​ಮಲೆನಾಡಿಗೆ ಸರಕಾರದ ಅನುದಾನ ಸಾಲುತ್ತಿಲ್ಲ: ಶಾಸಕ ನಿಂಗಯ್ಯ

Update: 2017-06-04 22:34 IST

ಮೂಡಿಗೆರೆ, ಜೂ.4: ಬರಗಾಲಕ್ಕೆ ತುತ್ತಾಗಿರುವ ಮಲೆನಾಡಿಗೆ ರಾಜ್ಯ ಸರಕಾರದ ಅನುದಾನ ಯಾವುದೇ ಯೋಜನೆಗೂ ಸಾಕಾಗುತ್ತಿಲ್ಲ. ನೀರಾವರಿ, ಗ್ರಾಮೀಣ ರಸ್ತೆ, ಸೇರಿದಂತೆ ಎಲ್ಲ್ಲ ಇಲಾಖೆಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡುವಂತೆ ಮಳೆಗಾಲದ ಅಧಿವೇಶನದಲ್ಲಿ ಸರಕಾರವನ್ನು ಆಗ್ರಹಿಸಲಾಗುವುದು ಎಂದು ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದ್ದಾರೆ.


ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2 ವರ್ಷಗಳಿಂದ ಸೂಕ್ತ ಸಮಯಕ್ಕೆ ಮಳೆ ಬಾರದೇ ಇರುವುದರಿಂದ ಕೃಷಿ ಚಟುವಟಿಕೆ ನಡೆಸಲಾಗದೆ ರೈತರು ಕಂಗಾಲಾಗಿದ್ದಾರೆ. ಬೋರ್‌ವೆಲ್ ಕೊರೆಯಲು ಅನುದಾನ ನೀಡಲಾಗಿದೆ. ಆದರೆ ಬೋರ್‌ವೆಲ್‌ಗೆ ಪಂಪ್, ಪೈಪ್‌ಲೈನ್ ಅಳವಡಿಸಲು ಅನುದಾನ ಬಂದಿಲ್ಲ. ಕೊಳವೆ ಬಾವಿಗಳನ್ನು ಕೊರೆದು ಶೇ.95 ಕೊಳವೆ ಬಾವಿಗಳಲ್ಲಿ ನೀರು ಲಭಿಸಿದ್ದರೂ ಇನ್ನೂ ನೀರೆತ್ತುವ ಸೌಲಭ್ಯ ಕಲ್ಪಿಸಲಾಗಿಲ್ಲ ಎಂದು ಹೇಳಿದರು.


ತುರ್ತು ಬರಪರಿಹಾರಕ್ಕೆ ತಾಲೂಕಿಗೆ ನೀಡಿರುವ ಅನುದಾನ ಅಲ್ಪಪ್ರಮಾಣದ್ದಾಗಿದೆ. ವಿವಿಧೆಡೆ ಶುದ್ಧ್ದಗಂಗಾ ಯೋಜನೆಯ ಕಾಮಗಾರಿ ಯಾವುದೋ ಖಾಸಗಿ ಕಂಪೆನಿಗೆ ವಹಿಸಿದ್ದು, ಇದನ್ನು ಯಾರು ನಿರ್ವಹಿಸುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಕಾಮಗಾರಿಯಲ್ಲಿ ಲೋಪಗಳಾಗುತ್ತಿರುವ ದೂರುಗಳಿದು,್ದ ಈ ಬಗ್ಗೆ ಅಧಿವೇಶನದಲ್ಲ್ಲಿ ಚರ್ಚಿಸಲಾಗುವುದು ಎಂದರು. ಕ್ಷೇತ್ರವ್ಯಾಪ್ತಿಯಲ್ಲಿ ನೀರಾವರಿ ಸೌಲಭ್ಯಕ್ಕೆ ಒಟ್ಟು 20 ಕೋಟಿ ನೀಡಲಾಗಿದೆ.

ಗಂಗಾ ಕಲ್ಯಾಣ ಯೋಜನೆಯಡಿ 450 ಕುಟುಂಬಗಳಿಗೆ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಅಂಬಳೆ ಹೋಬಳಿಯ 6 ಗ್ರಾಪಂ ವ್ಯಾಪ್ತಿಯ 47 ಗ್ರಾಮಗಳಿಗೆ ಯಗಡಿ ಡ್ಯಾಮ್‌ಗೆ ಹೋಗುವ ಹೊಳೆಯಿಂದ ಕುಡಿಯುವ ನೀರಿನ ಘಟಕ ಆರಂಭವಾಗಿದೆ. ಕಳಸ, ಗೋಣಿಬೀಡು, ಆಲ್ದೂರು, ಅಂಬಳೆ, ಆವುತಿಯಲ್ಲಿ ತಲಾ 1 ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು. ಈ ವೇಳೆ ಜೆಡಿಎಸ್ ಮುಖಂಡ ಪುಟ್ಟಸ್ವಾಮಿಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News