ಮುಳುಗಡೆ ಭೀತಿಯಲ್ಲಿ ಬಾರ್ಜ್...
Update: 2017-06-04 23:58 IST
ಕಾಮಗಾರಿ ನಿರತ ಬಾರ್ಜ್‌ವೊಂದು ಸಮುದ್ರ ಮಧ್ಯೆ ಬಂಡೆಕಲ್ಲಿಗೆ ಢಿಕ್ಕಿ ಹೊಡೆದು ಮುಳುಗಡೆ ಭೀತಿ ಎದುರಿಸುತ್ತಿದ್ದು, ಅದರಲ್ಲಿ 23 ಸಿಬ್ಬಂದಿ ಅಪಾಯಕ್ಕೆ ಸಿಲುಕಿಕೊಂಡಿರುವ ಘಟನೆ ಉಳ್ಳಾಲ ಮೊಗವೀರಪಟ್ಣ ಸಮುದ್ರದಲ್ಲಿಂದು ನಡೆದಿದೆ. ಬಾರ್ಜ್‌ನಲ್ಲಿದ್ದ ಎಲ್ಲ 27 ಕಾರ್ಮಿಕರನ್ನು ಕರಾವಳಿ ತಟರಕ್ಷಣಾ ಪಡೆ ಮತ್ತು ಕರಾವಳಿ ಕಾವಲು ಪೊಲೀಸ್ ಪಡೆ ರವಿವಾರ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿವೆ.