ಜಾನುವಾರುಗಳು ಜಮೀನಿನಲ್ಲಿ ಮೇಯುತ್ತಿದ್ದ ಕಾರಣಕ್ಕೆ ಗುಂಡೇಟು ರುಚಿ
Update: 2017-06-05 17:28 IST
ಹಾಸನ, ಜೂ.5: ದನ-ಕರುಗಳು ನಮ್ಮ ಜಮೀನಿನಲ್ಲಿ ಮೇಯುತ್ತಿದೆ ಎಂಬ ಚಿಕ್ಕ ಕಾರಣಕ್ಕೆ ಗುಂಡೇಟು ರುಚಿ ತೋರಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಅರಕಲಗೂಡು ತಾಲೂಕು ಆಲದಹಳ್ಳಿ ಗ್ರಾಮದ ನಿವಾಸಿ ಪ್ರಕಾಶ್ (40) ಎಂಬುವರೇ ಗುಂಡೇಟು ತಿಂದು ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ.
ಜಮೀನಿನಲ್ಲಿ ಹೋಗುತ್ತಿದ್ದ ಪ್ರಕಾಶ್‌ನನ್ನು ನಿಲ್ಲಿಸಿ, ನಮ್ಮ ಹೊಲದಲ್ಲಿ ದನ ಮೇಯಿಸುತ್ತಿಯಾ, ಎಂದು ಕೇಶವ ಎಂದು ಹೇಳಲಾಗುವ ವ್ಯಕ್ತಿಯು ಗುಂಡೇಟಿನಿಂದ ಹೊಡೆದಿದ್ದಾನೆ ಎಂದು ಗಾಯಳು ಪತ್ರಕರ್ತರಿಗೆ ಹೇಳಿದರು.
ಈತನ ಬಳಿ ಇರುವ ಗನ್‌ಗೆ ಲೈಸೆನ್ಸ್ ರಿನಿವಲ್ ಮಾಡಿಸಿಕೊಂಡಿರುವುದಿಲ್ಲ ಎಂದು ದೂರಿದ್ದಾರೆ. ಗಾಯಳು ತೊಡೆಗೆ ಸ್ಪ್ರೆಡ್ ಆಗುವ ಗುಂಡೇಟಿನಿಂದ ಹೊಡಿದಿರುವುದಾಗಿ ತಿಳಿಸಿದರು. ತೊಡೆಯ ಬಳಿ ನಾಲ್ಕೈದು ಗಾಯದ ಕಲೆಗಳು ಕಾಣಿಸಿಕೊಂಡಿದೆ.