×
Ad

​ಹಾಡಹಗಲೇ ಖಾರದ ಪುಡಿ ಎರಚಿ ದರೋಡೆ

Update: 2017-06-05 22:35 IST

ಕೊಪ್ಪ, ಜೂ.5: ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಬಳಿ ಸೋಮವಾರ ಬೆಳಗ್ಗೆ 11 ಗಂಟೆ ಸಮಯದಲ್ಲಿ ವಿದ್ಯುತ್ ಬಿಲ್ ಪಾವತಿ ಕೇಂದ್ರದ ಸಿಬ್ಬಂದಿಯ ಕಣ್ಣಿಗೆ ಖಾರದ ಪುಡಿ ಎರಚಿ ಹಣ ದರೋಡೆಗೈದಿರುವ ಘಟನೆ ನಡೆದಿದೆ.
ಎಂದಿನಂತೆ ಮೆಸ್ಕಾಂ ಕೇಂದ್ರದ ಸಿಬ್ಬಂದಿ ಸುರೇಶ್ ಎಂಬವರು ಗ್ರಾಹಕರಿಂದ ವಿದ್ಯುತ್ ಬಿಲ್ ಪಡೆಯಲು ಬಸ್ ನಿಲ್ದಾಣದ ಬಳಿ ಇರುವ ಕಚೆೇರಿಯಲ್ಲಿ ಕುಳಿತಿದ್ದರು.

ಈ ಸಮಯದಲ್ಲಿ ವಿದ್ಯುತ್ ಬಿಲ್ ಪಾವತಿ ನೆಪದಲ್ಲಿ ಬಂದಿರುವ ದರೋಡೆಕೋರರ ತಂಡದಲ್ಲಿನ ಓರ್ವ ಕ್ಯಾಶಿಯರ್‌ನ ಕಣ್ಣಿಗೆ ಖಾರದ ಪುಡಿ ಎರಚಿ ಸಿನಿಮೀಯ ಮಾದರಿಯಲ್ಲಿ ದರೋಡೆ ನಡೆಸಿರುವ ಘಟನೆ ನಡೆದಿದೆ.
ಜನನಿಬಿಡ ಪ್ರದೇಶದಲ್ಲಿಯೇ ಈ ದರೋಡೆ ಕೃತ್ಯ ನಡೆದಿದ್ದು, 65 ಸಾವಿರ ರೂ. ನಗದನ್ನು ತಂಡ ದರೋಡೆಗೈಯಲಾಗಿದೆ. ಸ್ಥಳಕ್ಕೆ ಕೊಪ್ಪಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News