ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣ: ತೆಲುಗು ಗೌಡ ಮಹಾಸಭಾದಿಂದ ಸನ್ಮಾನ
ಕಡೂರು, ಜೂ.7: ಕೆ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಹಶೀಲ್ದಾರ್ ಆಗಿ ನೇಮಕಗೊಂಡಿರುವ ಜಿಗಣೇಹಳ್ಳಿ ಗ್ರಾಮದ ಜೆ.ಡಿ. ಮಾರುತಿ ಮತ್ತು ಸೇನೆಯಲ್ಲಿ ಎನ್.ಎಸ್.ಜಿ. ಕಮಾಂಡೋ ಆಗಿ ಬಡ್ತಿ ಹೊಂದಿರುವ ಆಲಘಟ್ಟ ಗ್ರಾಮದ ಲಕ್ಷ್ಮಣ ಅವರನ್ನು ಅಖಿಲ ಭಾರತ ತೆಲುಗು ಗೌಡ ಮಹಾಸಭಾದ ವತಿಯಿಂದ ಸನ್ಮಾನಿಸಲಾಯಿತು.
ತಾಲೂಕಿನ ಆಲಘಟ್ಟ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಇವರನ್ನು ಸನ್ಮಾನಿಸಲಾಯಿತು. ತಾಪಂ ಸದಸ್ಯ ಜಿಗಣೇಹಳ್ಳಿ ಮಂಜುನಾಥ್ ಮಾತನಾಡಿ ಗ್ರಾಮೀಣ ಭಾಗದಲ್ಲೂ ಪ್ರತಿಭೆಗಳಿಗೆ ಎನ್ನುವುದಕ್ಕೆ ಮಾರುತಿಯವರೇ ಸಾಕ್ಷಿಯಾಗಿದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಸೌಲಭ್ಯವನ್ನು ಸರ್ಕಾರಗಳು ಕಲ್ಪಿಸಿದಲ್ಲಿ ಇಂತಹ ಅನೇಕ ಪ್ರತಿಭೆಗಳು ಬೆಳಕಿಗೆ ಬರಲಿವೆ ಎಂದು ತಿಳಿಸಿದರು.
ಅಖಿಲ ಭಾರತ ತೆಲುಗುಗೌಡ ಮಹಾಸಭಾದ ಅಧ್ಯಕ್ಷ ಎಸ್.ಜಿ. ಕೊಪ್ಪಲು ನಾಗರಾಜು ಮಾತನಾಡಿ ವಿದ್ಯೆಗೆ ಜಾತಿ ಅಂತ್ತಸ್ಥಿನ ಬೇಧಭಾವವಿಲ್ಲ, ಯಾರು ನಿಷ್ಟೆ ಹಾಗೂ ಶ್ರದ್ದೆಯಿಂದ ಸರಸ್ಪತಿಯನ್ನು ಪೂಜಿಸುತ್ತಾರೋ ಅಂತಹವರಿಗೆ ಸರಸ್ಪತಿ ಒಲಿಯುತ್ತಾಳೆ ಎಂದರು.
ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕುರುಬಕೆರೆ ಮಹೇಶ್ ಮಾತನಾಡಿ ಸೀಮಿತ ಅವಕಾಶದಲ್ಲಿಯೇ ಮಾರಿತಿಯವರು ಕಷ್ಟಪಟ್ಟು ವ್ಯಾಸಂಗ ಮಾಡಿ ಇಂದು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಹಾಗೇಯೆ ಲಕ್ಷ್ಮಣ್ ಅವರು ತಮ್ಮ ಕರ್ತವ್ಯ ನಿಷ್ಟೆಯಿಂದ ಬಡ್ತಿ ಹೊಂದಿದ್ದು, ಇವರ ಮುಂದಿನ ಜೀವನದಲ್ಲಿ ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದರು.
ಈ ಸಂದರ್ಭ ಮಹಾಸಭಾದ ಗೌರವಾಧ್ಯಕ್ಷ ಎಂ.ಡಿ. ಗೋವಿಂದಪ್ಪ, ನಿರ್ದೇಶಕರುಗಳಾದ ದಾಸಪ್ಪ, ರುದ್ರಪ್ಪ, ರಾಜಪ್ಪ ಉಪಸ್ಥಿತರಿದ್ದರು.