×
Ad

ಡಿಸಿ ಕಚೇರಿ ಮುಂಭಾಗದಲ್ಲಿ ಗ್ರಾಮಸ್ಥರ ಪ್ರತಿಭಟನೆ

Update: 2017-06-08 22:55 IST

 ಶಿವಮೊಗ್ಗ, ಜೂ. 8: ತಾಲೂಕಿನ ಹಸೂಡಿ ಫಾರಂ ನಿವಾಸಿಗಳಿಗೆ ಸಮರ್ಪಕ ಪಡಿತರ ವಿತರಣೆ ಮತ್ತು ಸರಕಾರಿ ಯೋಜನೆಗಳನ್ನು ನೀಡುವಲ್ಲಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಅಲ್ಲಿನ ಗ್ರಾಮಸ್ಥರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.


 ಬಯೋಮೆಟ್ರಿಕ್ ಪದ್ಧತಿ ಜಾರಿಗೆ ಬಂದನಂತರ ಸರಿಯಾಗಿ ಪಡಿತರ ವಿತರಣೆ ಯಾಗುತ್ತಿಲ್ಲ. ಇದರಿಂದ ಜನರಿಗೆ ತೊಂದರೆಯಾಗಿದೆ. ಇಂಟರ್‌ನೆಟ್ ಸೌಲಭ್ಯ ದೊರ ಕುತ್ತಿಲ್ಲ ಎಂಬ ನೆಪವನ್ನು ಪಡಿತರ ಅಂಗಡಿಯವರು ನೀಡುತ್ತಿದ್ದಾರೆ. ಆದರೆ, ಜನರು ಆಹಾರ ಪದಾರ್ಥಕ್ಕಾಗಿ ಕಾದು ವಾಪಸ್‌ಹೋಗಬೇಕಾದ ಸ್ಥಿತಿ ಎದುರಾಗಿದೆ ಎಂದು ಹೇಳಿದರು.

ಸಾಮಾಜಿಕ ಭದ್ರತಾ ಯೋಜನೆ, ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷೆ ಮೊದಲಾದ ಯೋಜನೆಗಳನ್ನು ಇಲ್ಲಿನ ಗ್ರಾಮಸ್ಥರಿಗೆ ನೀಡದೆ ವಂಚಿಸಲಾಗುತ್ತಿದೆ. ಆಧಾರ ಲಿಂಕ್ ಮಾಡಿಸಿದರೂ ಖಾತೆಗೆ ಹಣ ಬರುತ್ತಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು, ಬಾಕಿ ಇರುವ ಪ್ರಕರಣಗಳನ್ನು ಕೂಡಲೇ ತ್ವರಿತಗೊಳಿಸಿ ಹಣಬರುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಸೀಮೆಎಣ್ಣೆ ಕಡಿತಮಾಡಿದ ನಂತರ ಅದರ ಬದಲು ಗ್ಯಾಸ್ ಸಂಪರ್ಕ ನೀಡುವುದಾಗಿ ಹೇಳಿದ್ದರೂ ಇಲ್ಲಿಯವರೆಗೆ ನೀಡಿಲ್ಲ.

ಹೀಗಾಗಿ ಬಡವರು ಸೀಮೆಎಣ್ಣೆ ಮತ್ತು ಗ್ಯಾಸ್ ಇಲ್ಲದೆ ಅಡುಗೆಗೆ ಪರದಾಡಬೇಕಿದೆ. ಕೂಡಲೇ ತಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದಭರ್ದಲ್ಲಿ ಹಸೂಡಿ ಗ್ರಾಪಂ ಸದಸ್ಯ ಸಂಜಯ್‌ಕುಮಾರ್, ಗ್ರಾಮಸ್ಥರಾದ ಪ್ರೇಮಾವತಿ, ಚೆಲ್ಲಾ, ಮುನಿಯಮ್ಮ, ವಿಜಯ, ರೇಣುಕಮ್ಮ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News