×
Ad

​ ಪೊಲೀಸರ ಬಲೆಗೆ ಸರಣಿ ಮನೆಗಳ್ಳರು

Update: 2017-06-08 23:09 IST

ಮುಂಡಗೋಡ, ಜೂ.8: ಕಳೆದ ಸುಮಾರು 25 ದಿನಗಳ ಹಿಂದೆ ಪಟ್ಟಣದ ಗಾಂಧಿನಗರದಲ್ಲಿ ಸರಣಿ ಮನೆಗಳ್ಳತನ ನಡೆಸಿದ್ದ ಹಾಗೂ ವಿವಿಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮುಂಡಗೋಡ ಪೊಲೀಸರು ಯಶಸ್ವಿಯಾಗಿದ್ದಾರೆ.


ಹಳೆ ಹುಬ್ಬಳ್ಳಿಯ ಹೆಗ್ಗೆರಿ ಕಾಲನಿಯ ರಫೀಕ ಇಮಾಮ್‌ಸಾಬ್ ಮುಲ್ಲಾ ಹಾಗೂ ಅಸ್ಲಂ ಹುಸೇನ್‌ಸಾಬ್ ಸವಣೂರ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ನ್ಯಾಯಂಗ ವಶಕ್ಕೆ ಒಪ್ಪಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಐ ಕಿರಣಕುಮಾರ ನಾಯಕ್, ಪಿಎಸೈ ಲಕ್ಕಪ್ಪ ನಾಯಕ, ಕ್ರೈಂಬ್ರಾಂಚ್ ಎಎಸೈ ಅಶೋಕ ರಾಠೋಡ, ಕಾನ್‌ಸ್ಟೇಬಲ್‌ಗಳಾದ ಮುಹಮ್ಮದ ಜಾಫರ ಅದರಗುಂಚಿ, ಶಿವರಾಜ ಚೌವ್ಹಾಣ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News