ಜೂಜಾಟ: ಇಬ್ಬರ ಬಂಧನ
Update: 2017-06-08 23:13 IST
ಚಿಕ್ಕಮಗಳೂರು, ಜೂ.8: ಅಂದರ್-ಬಾಹರ್ ಹೆಸರಿನ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಅಜ್ಜಂಪುರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಅಜ್ಜಂಪುರದ ಯಲ್ಲಪ್ಪ(45) ಮತ್ತು ಆಂಜಿನಪ್ಪ(43) ಬಂಧಿತ ಆರೋಪಿಗಳು ಎನ್ನಲಾಗಿದೆ. ಇವರು ಅಂತರಘಟ್ಟೆ ದಸರಾ ಬೈಲಿನಲ್ಲಿ ಅಕ್ರಮ ಜೂಜಾಟದಲ್ಲಿ ತೊಡಗಿದ್ದರು ಎನ್ನಲಾಗಿದ್ದು,ಈ ವೇಳೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ 2,000 ರೂ.ನಗದು ವಶಪಡಿಸಿಕೊಂಡಿದ್ದಾರೆ.