ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಮೃತ್ಯು
Update: 2017-06-08 23:14 IST
ಮೂಡಿಗೆರೆ, ಜೂ.8: ಇತ್ತೀಚೆಗೆ ಮೂಡಿಗೆರೆ ಪಪಂ ಕಚೇರಿಯ ಮಹಡಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿದ್ದ ಆಧಾರ್‌ಕಾರ್ಡ್ ಸಿಬ್ಬಂದಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೇ 31ರಂದು ಬೂಧನಿಕೆ ಎಂಬಲ್ಲಿನ ಶ್ರೀಕಾಂತ್(30), ಕಚೆೇರಿ ಸಮಯದಲ್ಲಿ ಅಸ್ವಸ್ಥಗೊಂಡಿದ್ದ ಎನ್ನಲಾಗಿದ್ದು, ಆತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮದುವೆಯಾಗಲಿಲ್ಲ ಎಂಬ ಕೊರಗಿನಿಂದ ಶ್ರೀಕಾಂತ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮೃತನ ಸಹೋದರಿ ಕವಿತಾ ಎಂಬವರು ಮೂಡಿಗೆರೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.